(ನ್ಯೂಸ್ ಕಡಬ) newskadaba.com ,ಬೇಸಗೆ ಈಗಾಗಲೇ ಶುರುವಾಗಿದೆ. ಬಿಸಿಯ ಶಾಖಕ್ಕೆ ಚರ್ಮದ ಜತೆಗೆ ದೇಹದ ಒಳಗೂ ಬಿಸಿಯ ಅನುಭವವಾಗುತ್ತದೆ. ಈ ಸಮಯದಲ್ಲಿ ಮಸಾಲೆ ಪದಾರ್ಥಗಳಿಂದ ಆದಷ್ಟು ದೂರವಿರಬೇಕು. ಕೇವಲ ತಂಪು ಪಾನೀಯಗಳನ್ನು ಕುಡಿದ ಮಾತ್ರಕ್ಕೆ ದೇಹಕ್ಕೆ ತಂಪಾಗುವುದಿಲ್ಲ. ಕೆಲವು ಆಹಾರಗಳನನ್ನು ಸೇವಿಸಿದಾಗಲೂ ದೇಹದ ಬಿಸಿ ಕಡಿಮೆಯಾಗುತ್ತದೆ. ಅಂತಹ ಕೆಲವು ಆಹಾರಗಳು ಇಲ್ಲಿವೆ.
ಕಲ್ಲಂಗಡಿಹಣ್ಣಿನಕುಲ್ಫಿ
ಬೇಕಾಗುವಸಾಮಗ್ರಿಗಳು:
ಕತ್ತರಿಸಿಬೀಜತೆಗೆದಕಲ್ಲಂಗಡಿಹಣ್ಣು:2ಕಪ್
ಪುದಿನಾಎಲೆ:4/5
ಸಕ್ಕರೆ:3ಕಪ್
ಉಪ್ಪು: ರುಚಿಗೆ ತಕ್ಕಷ್ಟು
ಮಾಡುವವಿಧಾನ:
ಮೊದಲು ಮಿಕ್ಸಿ ಜಾರಿಗೆ ಕತ್ತರಿಸಿದ ಕಲ್ಲಂಗಡಿಹಣ್ಣಿನ ಚೂರುಗಳನ್ನು ಹಾಕಿ ಅದಕ್ಕೆ ಪುದೀನಾ ಎಲೆ, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಅರೆಯಬೇಕು. ಅನಂತರ ಆ ಮಿಶ್ರಣಕ್ಕೆ ಉಳಿದಿದ್ದ ಕಲ್ಲಂಗಡಿ ಹಣ್ಣನ್ನು ಸೇರಿಸಿ ಕುಲ್ಫಿ ಪಾತ್ರ ಅಥವಾ ಪ್ಲಾಸ್ಟಿಕ್ ಗ್ಲಾಸ್‌ಗೆ ಆ ಮಿಶ್ರಣವನ್ನು ಹಾಕಿ 4 ಗಂಟೆ ಫ್ರಿಡ್ಜ್ ನಲ್ಲಿ ಇಡಬೇಕು. ಆಮೇಲೆ ಅದಕ್ಕೆ ಸ್ಟಿಕ್‌ನ್ನು ಜೋಡಿಸಬೇಕು. ಅನಂತರ ಒಂದೆರೆಡು ಗಂಟೆ ಫ್ರಿ ಡ್ಜ್ ನಲ್ಲಿಟ್ಟು ಕಲ್ಲಂಗಡಿ ಹಣ್ಣಿನನ ಕುಲ್ಫಿ ಸವಿಯಲು ಸಿದ್ಧವಾಗುತ್ತದೆ.