ಹೊಸಮಜಲು ಶಾಲೆಯಲ್ಲಿ ‘ಹಸಿರು ತೋಟ’ ನಿರ್ಮಾಣ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.03. ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಹೊಸಮಜಲು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಕೌಕ್ರಾಡಿ ಗ್ರಾ.ಪಂ.ನ ಉದ್ಯೋಗ ಖಾತ್ರಿ ಯೋಜನೆಯಡಿ ಹಸಿರು ತೋಟ ನಿರ್ಮಾಣ ಮಾಡಲಾಯಿತು.

ಸಹಕಾರಿ ಯುವ ಮಂಡಲದ ಅಧ್ಯಕ್ಷ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಶಾಲೆಯ ಸುಮಾರು 1.5 ಎಕ್ರೆ ಜಾಗದಲ್ಲಿ ತೆಂಗು ಹಾಗೂ ಹಣ್ಣಿನ ತೋಟ ನಿರ್ಮಾಣ ಮಾಡಲಾಯಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕೆ.ಇ. ಅಬೂಬಕ್ಕರ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಧರ್ಣಪ್ಪ ಗೌಡ, ಒಕ್ಕೂಟದ ಅಧ್ಯಕ್ಷ ಸೋಮಪ್ಪ ಎಮ್, ಮುಖ್ಯಶಿಕ್ಷಕಿ ಪ್ರೇಮ, ನಾಟಿವೈದ್ಯರಾದ ರಘುನಾಥ್ ಪಂಡಿತ್ ಮತ್ತಿತರರು ಸಹಕರಿಸಿದರು.

Also Read  ನಾಳೆ (ಜು. 25) ಸುಳ್ಯ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

 

error: Content is protected !!
Scroll to Top