ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು ಮಿಶ್ರಿತ ಧಾರಾಕಾರ ಮಳೆ ➤ ಕಡಬ ಪರಿಸರದಲ್ಲಿ ಮೋಡ ಕವಿದ ವಾತಾವರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.07. ಜಿಲ್ಲೆಯ ವಿವಿಧೆಡೆ ಗುಡುಗು – ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಭೂಮಿ ತಂಪಾಗಿದೆ.

ಪುತ್ತೂರು, ಕಬಕ, ಬಂಟ್ವಾಳ, ಅಡ್ಯಾರು, ಉಪ್ಪಿನಂಗಡಿ, ಹಿರೇ ಬಂಡಾಡಿ, ಸುಳ್ಯ ಪರಿಸರದಲ್ಲಿ ಸಾಮಾನ್ಯ ಮಳೆಯಾಗಿದ್ದು, ಮೆಲ್ಕಾರ್, ಸಜಿಪದಲ್ಲಿ ಧಾರಾಕಾರ ಮಳೆಯಾಗಿದೆ. ಕಡಬ ಪರಿಸರದಲ್ಲಿ ಮೋಡ ಕವಿದ ವಾತಾವರಣವಿದ್ದು, ಪೆರಿಯಶಾಂತಿ, ಇಚಿಲಂಪಾಡಿ ಭಾಗದಲ್ಲಿ ತುಂತುರು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಮಳೆಯಾದುದರಿಂದ ತೀವ್ರ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

error: Content is protected !!
Scroll to Top