ಶಿರಾಡಿ: ಆಳಕ್ಕೆ ಉರುಳಿದ ಟೊಯೋಟಾ ಎಟಿಯೋಸ್ ಕಾರು ➤ ಓರ್ವ ಮೃತ್ಯು, ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.07. ಚಾಲಕನ ನಿಯಂತ್ರಣ ತಪ್ಪಿದ ಟೊಯೋಟಾ ಎಟಿಯೋಸ್ ಕಾರೊಂದು ರಸ್ತೆ ಬದಿಯ ಆಳ ಪ್ರದೇಶಕ್ಕೆ ಉರುಳಿ ಬಿದ್ದುದರಿಂದ ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿಯಲ್ಲಿ ಮಂಗಳವಾರದಂದು ನಡೆದಿದೆ.

ಬೆಂಗಳೂರು ಮೂಲದ ಯಾತ್ರಾರ್ಥಿಗಳಿದ್ದ ಕಾರು ಧರ್ಮಸ್ಥಳದಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಗ್ರಾಮದ ಕೊಡ್ಯಕಲ್ಲುವಿನಲ್ಲಿ ರಸ್ತೆ ಬದಿಯ ಆಳವಾದ ಗುಂಡಿಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಬೆಂಗಳೂರು ಮೂಲದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮನೋಜ್(25), ಪ್ರಶಾಂತ್ (23) ಸೇರಿದಂತೆ ನಾಲ್ಕು ಜನರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಉಡುಪಿ: ದೇವಸ್ಥಾನದ ಒಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

error: Content is protected !!
Scroll to Top