ಕೊಳ್ನಾಡು: ರಸ್ತೆಗುರುಳಿದ ಅವಳಿ ಮರಗಳು ► ರಾಜ್ಯ ಹೆದ್ದಾರಿ 101 ಒಂದು ತಾಸು ಬ್ಲಾಕ್

(ನ್ಯೂಸ್ ಕಡಬ) newskadaba.com ಬಂಟ್ವಾಳ. ಆ.03. ಮಾರ್ಣಬೈಲಿನಿಂದ – ಕಬಕ ಸಂಪರ್ಕಿಸುವ ರಾಜ್ಯ ಹೆದ್ದಾರಿ 101 ರ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಬೀಸಿದ ಭಾರೀ ಗಾಳಿಗೆ ಬೃಹತ್ ಅವಳಿ ಮರಗಳು ಧರಾಶಾಯಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.

ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಕಾಡುಮಠ ಸೇತುವೆಯ ಬಳಿಯಲ್ಲಿನ ಬೃಹತ್ ಹಲಸಿನ ಮರ ಹಾಗೂ ದೇವದಾರ್ ಮರಗಳೆರಡು ರಸ್ತೆಗೆ ಉರುಳಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದಿದ್ದು, ಅಪಾರ ನಷ್ಟವುಂಟಾಗಿದೆ. ಶಾಲಾ-ಕಾಲೇಜು ಬಿಡುವಿನ ಸಮಯವಾದ್ದರಿಂದ ಹೆದ್ದಾರಿಯುದ್ದಕ್ಕೂ ವಾಹನಗಳು ಒಂದು ತಾಸುಗಳ ಕಾಲ ಸಾಲುಗಟ್ಡಿ ನಿಂತಿತ್ತು. ಘಟನೆ ಅರಿತ ಕೂಡಲೇ ಸ್ಥಳಕ್ಕಾಗಮಿಸಿದ ಕೊಳ್ನಾಡು ಹೆಲ್ಪಿಂಗ್ ಹ್ಯಾಂಡ್ಸ್(ರಿ) ಕರೈ ಸದಸ್ಯರು ಹಾಗೂ ಸ್ಥಳಿಯರು ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದರ. ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಹಾಗೂ ಊರವರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Also Read  ನಾಳೆ (ಜು. 05) ದ.ಕ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಈ ಸಂದರ್ಭದಲ್ಲಿ ಟ್ರಸ್ಟ್ ಸ್ಥಾಪಕಾದ್ಯಕ್ಷ ಎಚ್.ಎಂ. ಖಾಲೀದ್ ಕೊಳ್ನಾಡು, ಕಾರ್ಯದರ್ಶಿ ಅಸೀಪ್ ಕರೈ, ಸ್ಥಳೀಯ ರಝಾಕ್ ಕರೈ, ಮೆಸ್ಕಾಂ ಸಿಬ್ದಂದಿ ಚಂದ್ರಶೇಖರ ಕಾಡುಮಠ ಹಾಗೂ ಸಿಬ್ಬಂದಿಗಳು, ನಝೀರ್ ಕರೈ ಹಾಗೂ ಊರವರು ಸಹಕರಿಸಿದರು.

error: Content is protected !!
Scroll to Top