ಪೆರ್ನೆ: ಚರಂಡಿಗೆ ಇಳಿದ ಕುಕ್ಕೆ ಸುಬ್ರಹ್ಮಣ್ಯ – ಗೋಕರ್ಣ ಎಕ್ಸ್‌ಪ್ರೆಸ್ ಬಸ್

(ನ್ಯೂಸ್ ಕಡಬ) newskadaba.com ಕಡಬ, ಮೇ.07. ಕುಕ್ಕೇ ಸುಬ್ರಹ್ಮಣ್ಯದಿಂದ ಕಡಬ ಮಾರ್ಗವಾಗಿ ಮಂಗಳೂರು ಮೂಲಕ ಗೋಕರ್ಣ ಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಎಕ್ಸ್‌ಪ್ರೆಸ್‌ ಬಸ್ ಬೇರೆ ವಾಹನಕ್ಕೆ ಸೈಡ್ ಕೊಡುತ್ತಿದ್ದ ವೇಳೆ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ಮಂಗಳವಾರದಂದು ಪೆರ್ನೆಯಲ್ಲಿ ಸಂಭವಿಸಿದೆ.

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದಿಂದ ಗುಂಡ್ಯವರೆಗಿನ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವೆಡೆ ರಸ್ತೆ ಬದಿಯಲ್ಲಿ ಮಣ್ಣು ಅಗೆದು ಅಪೂರ್ಣ ಅವಸ್ಥೆಯಲ್ಲಿದೆ. ಮಂಗಳವಾರದಂದು ಪೆರ್ನೆ ಎ.ಎಂ. ಆಡಿಟೋರಿಯಂ ಎದುರು ಗೋಕರ್ಣ ಬಸ್ ನ ಮುಂಭಾಗದಿಂದ ತೆರಳುತ್ತಿದ್ದ ವಾಹನವೊಂದು ಹಠಾತ್ತನೆ ಬ್ರೇಕ್ ಹಾಕಿದ್ದು, ಈ ವೇಳೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಘಟನೆಯಲ್ಲಿ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಇದರಿಂದಾಗಿ ಅಗತ್ಯ ಕೆಲಸದ ಹಿನ್ನೆಲೆಯಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಹಲವು ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.

Also Read  ಗೃಹರಕ್ಷಕರಿಗೆ ಹೃದಯ ಪುನಶ್ಚೇತನ ತರಬೇತಿ ಶಿಬಿರ; ಹೃದಯ ಪುನಶ್ಚೇತನ ಕೌಶಲ್ಯ ಅತ್ಯಗತ್ಯ- ಡಾ|| ಕಿಶನ್ ರಾವ್ ಬಾಳಿಲ

error: Content is protected !!
Scroll to Top