ಮಂಗಳೂರು-ತಿರುಪತಿ ಪ್ಯಾಕೇಜ್ ಪ್ರವಾಸ

ಮಂಗಳೂರು ಮೇ 4( ನ್ಯೂಸ್ ಕಡಬ) newskadaba.com,):- ಕರಾರಸಾ.ನಿಗಮ ಮಂಗಳೂರು ವಿಭಾಗದಿಂದ ಮೇ 11 ರಂದು ಒಂದು ದಿನದ ಮಂಗಳೂರು-ತಿರುಪತಿ ಪ್ಯಾಕೇಜ್ ಪ್ರವಾಸವನ್ನು ಮಲ್ಟಿಆಕ್ಸ್‍ಲ್ ಸಾರಿಗೆಯಲ್ಲಿ ಓರ್ವ ಪ್ರಯಾಣಿಕರಿಗೆ ತಲಾ ರೂ. 4000/-ರಂತೆ ಪ್ರಯಾಣದರ ವಿಧಿಸಿ ಸಾರಿಗೆ ಕಾರ್ಯಾಚರಿಸಲು ಯೋಜಿಸಲಾಗಿದೆ. ಮಂಗಳೂರಿನಿಂದ ಹೊರಡುವ ಪ್ಯಾಕೇಜ್ ಪ್ರವಾಸವು ನಿಗಮದ ಸಾರಿಗೆಯಲ್ಲಿ ಪ್ರಯಾಣದೊಂದಿಗೆ ಹೊಟೇಲ್‍ನಲ್ಲಿ ಫ್ರೆಶ್‍ಅಪ್, ಉಪಹಾರ, ಊಟ, ಪ್ರತಿ ಟಿಕೇಟಿಗೆ 2 ಲಡ್ಡು, ತಿರುಮಲದಲ್ಲಿ ಶೀಘ್ರ ದರ್ಶನ, ಸ್ಥಳೀಯ ಪದ್ಮಾವತಿ ದೇವಾಲಯ ದರ್ಶನ ಒಳಗೊಂಡಿರುತ್ತದೆ. ಪ್ಯಾಕೇಜ್ ಪ್ರವಾಸಕ್ಕೆ ತಿತಿತಿ.ಞsಡಿಣಛಿ.iಟಿ ನಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ. ಸದರಿ ಪ್ಯಾಕೇಜ್ ಪ್ರವಾಸ ಸಾರಿಗೆಯು ಹೊರಡುವ ವೇಳಾ ವಿವರ ಇಂತಿವೆ: ಮೇ 11 ರಂದು ಮಂಗಳೂರು ನಿರ್ಗಮನ ಸಮಯ ಅಪರಾಹ್ನ 1 ಗಂಟೆ ಪಿಕ್‍ಅಪ್ ಪಾಯಿಂಟ್-ಮಂಗಳೂರು ನಗರ, ಬಜ್ಪೆ ಮಂಗಳೂರು ನಗರ, ಬಜ್ಪೆ, ಕೈಕಂಬ, ಗಂಜಿಮಠ, ಮೂಡಬಿದ್ರೆ, ವೇಣೂರು, ಗುರುವಾಯನಕೆರೆ ಮೇ 12 ರಂದು ತಿರುಪತಿ ನಿರ್ಗಮನ ಸಮಯ ಸಂಜೆ 5 ಗಂಟೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಾಸಂ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಈಜುಕೊಳದಲ್ಲಿ ನಟಿ ರಾಧಿಕಾ ಮದನ್ ವರ್ಕೌಟ್, ವಿಡಿಯೋ ವೈರಲ್!

error: Content is protected !!
Scroll to Top