(ನ್ಯೂಸ್ ಕಡಬ) newskadaba.com ಕಡಬ, ಆ.03. ಪ್ರತಿಯೊಬ್ಬ ವ್ಯಕ್ತಿಯೂ ಗ್ರಾಮದ ಅಭಿವೃದ್ದಿಗೆ ಚಿಂತಿಸಿದಾಗ ಗ್ರಾಮಾಭಿವೃದ್ದಿ ಹೊಂದಲು ಸಾಧ್ಯ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ವೇದಿಕೆಯ ನೇತೃತ್ವ ವಹಿಸಿದ್ದ ವಿಜಯ ಕುಮಾರ್ ಎರ್ಕ ಹೇಳಿದರು.
ಅವರು ಇತ್ತೀಚೆಗೆ ಬಿಳಿನೆಲೆ ಗ್ರಾಮದ ಪುತ್ತಿಲ ಬೈಲಡ್ಕ ವಿದ್ಯುತ್ ಬಳಕೆದಾರಿಂದ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಮನಸ್ಸಿನಲ್ಲಿ ಸ್ವಾರ್ಥವನ್ನು ಬಿಟ್ಟು ಸಮಾಜದ ಉದ್ದಾರಕ್ಕೆ ಅಪಾರ ಸೇವೆ ಸಲ್ಲಿಸಿದಾಗ ದೇಶ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ. ಪ್ರತಿಯೊಂದು ಕೆಲಸಗಳನ್ನು ಮಾಡುವಾಗ ಸರ್ಕಾರ ಅನುದಾನ ಕಾಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಜನತೆಯೇ ಸಮರ್ಪಕ ಭಾವನೆಯಿಂದ ಗ್ರಾಮದ ಅಭಿವೃದ್ದಿಗೆ ಸಹಕರಿಸಿದ್ದರೆ ಉತ್ತಮ ವಾತಾವರಣ ನಿರ್ಮಾಣ ಮಾಡುವುದರಿಂದ ಐಕ್ಯತೆ ಮೂಡುತ್ತದೆ, ಪ್ರತೀ ವರ್ಷ ನಡೆಯುವ ಶ್ರಮದಾನ ಕಾರ್ಯದಲ್ಲಿ ಸ್ಥಳೀಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ಸರ್ಕಾರದಿಂದ ಮೂಲ ಸೌಕರ್ಯ ಸಿಗದೆ ವಂಚಿತರಾಗಿದ್ದೇವೆ ಎಂದು ತಿಳಿಸಿದರು.
ಮೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ನಾಗರಾಜು ಮಾತನಾಡಿ, ಬಿಳಿನೆಲೆ ಭಾಗಕ್ಕೆ ಗುಣಮಟ್ಟದ ವಿದ್ಯುತ್ ನೀಡಲು ಸಹಕರಿಸುತ್ತಿದ್ದೇವೆ. ಆದರೂ ಮಳೆಗಾಲದಲ್ಲಿ ರಸ್ತೆಯ ಅಕ್ಕ-ಪಕ್ಕದ ಮರಗಳು ಗಾಳಿಗೆ ಲೈನ್ಗೆ ಬಿದ್ದು ಅಪಾರ ನಷ್ಟ ಉಂಟಾಗಿದೆ. ನಮ್ಮ ನಮ್ಮ ಇಲಾಖೆಯ ಸಿಬ್ಬಂದಿಯವರು ಒಳ್ಳೆಯ ರೀತಿಯಲ್ಲಿ ವಿದ್ಯುತ್ ಬಳಕೆದಾರರೊಂದಿಗೆ ಸಹಕರಿಸುತ್ತಿದ್ದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳಾದ ಚನ್ನಯ್ಯ ಸ್ವಾಮಿ, ರಮೇಶ್ ಪಿ, ಅರ್ಜುನ ಎಸ್, ಇಮಾಮ್, ಮೂರ್ತಮಾ ಎಮ್.ವೈ, ವಿದ್ಯುತ್ ಬಳಕೆದಾರನೊಂದಿಗೆ ಶ್ರಮದಾನದಲ್ಲಿ ಭಾಗವಹಿಸಿದರು. ಪ್ರಮುಖರಾದ ಉಮೇಶ್ ತಿಮ್ಮಡ್ಕ, ಚೆನ್ನಪ್ಪ ಗೌಡ ತಿಮ್ಮಡ್ಕ, ಧರ್ಮಪಾಲ ತಿಮ್ಮಡ್ಕ, ಅನಿಲ್ ಕುಮಾರ್, ವೆಂಕಟ್ರಮಣ ಹೊಸಕ್ಲು, ವಿನಯ ಪುತ್ತಿಲ, ಕುಸುಮಾಧರ ಅರ್ಗೆಣಿ, ಪುರುಷೋತ್ತಮ ಬೈಲು, ಸುನಿಲ್ ಬೈಲು, ಸುಂದರ ಗೌಡ ಚಿದ್ಗಲ್, ಬಾಲಕೃಷ್ಣ ಪುರಿಕೆರೆ, ಚೇತನ ಗೌಡ ಚೆಂಡಹಿತ್ಲು, ಸಜಿತ್ ಕುಮಾರ್ ಚೆಂಡಹಿತ್ಲು ತಂಡ ಜವಾಬ್ದಾರಿಯನ್ನು ನೀಡಲಾಯಿತು. ಚೆಂಡೆಹಿತ್ಲು, ಚಿದ್ಗಲ್, ಪುರಿಕೆರೆಗುಡ್ಡೆ, ಪುತ್ತಿಲ, ಬೈಲು, ಮಾಲಾಜೆ ಹಾಗೂ ತಿಮ್ಮಡ್ಕ ಭಾಗಗಳಿಂದ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವಿಜಯಕುಮಾರ್ ಎರ್ಕ ಸ್ವಾಗತಿಸಿ, ಸತೀಶ್ ಎರ್ಕ ವಂದಿಸಿದರು.
65 ಕೆವಿ ವಿದ್ಯುತ್ ಪರಿವರ್ತಕ ಎರ್ಕ ಎಂಬಲ್ಲಿ ಅಳವಡಿಸುವುದು, ಬಿಳಿನೆಲೆ ಹರಿದು ಬರುವ ರಸ್ತೆಯ ಒಗ್ಗುನಿಂದ ಚೆಂಡೆ ಹಿತ್ಲುರವರಿಗೆ ವಿದ್ಯುತ್ ದೀಪದ ಹಾಕುವುದು, ಅಪಾಯದಿರುವ ವಿದ್ಯುತ್ ಲೈನ್ಗಳಿಗೆ ಆರ್.ಸಿ.ಸಿ ಕಂಬಗಳನ್ನು ಕೆಲವು ಕಡೆ ಅಳವಡಿಸುವಂತೆ ಮೆಸ್ಕಾಂ ಇಲಾಖೆಗೆ ಗ್ರಾಮಸ್ಥರು ಬೇಡಿಕೆ ಇಟ್ಟರು.