(ನ್ಯೂಸ್ ಕಡಬ) newskadaba.com ಕಡಬ, ಮೇ.05. ಸಸ್ಯಾಹಾರಿ ಹಾಗೂ ಮಾಂಸಾಹಾರಿ ಹವಾನಿಯಂತ್ರಿತ ಫ್ಯಾಮಿಲಿ ರೆಸ್ಟೋರೆಂಟ್ ‘ಬಿರಿಯಾನಿ ಹೌಸ್’ ಕಡಬ ಮುಖ್ಯರಸ್ತೆಯಲ್ಲಿರುವ ಸೈಂಟ್ ಜೋಕಿಮ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಗುರುವಾರದಂದು ಶುಭಾರಂಭಗೊಂಡಿತು.
ಮಾಸ್ಟರ್ ಮಹಮ್ಮದ್ ಫಿಝಾನ್‍ರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಹಿರಿಯರಾದ ಹಾಜಿ ಎ.ಎಂ.ಅಬೂಬಕ್ಕರ್, ಕಡಬ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್, ಎಪಿಎಂಸಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸೊಳಿಕೆ, ಕಡಬ ವರ್ತಕರ ಸಂಘದ ಕೋಶಾಧಿಕಾರಿ ಇಸ್ಮಾಯಿಲ್ ಕೆಮ್ಮಾರ, ಯುನಿಟಿ ಟ್ರೇಡರ್ಸ್‍ನ ಮಾಲಕ ಅಶ್ರಫ್, ಕಡಬ ಶ್ರೀ ದೇವಿ ಫ್ಲವರ್ ಸ್ಟಾಲ್‍ನ ರಮೇಶ್ ಶೆಟ್ಟಿ, ಕಡಬ ಲ್ಯಾಂಡ್ ಲಿಂಕ್ಸ್‍ನ ಸುರೇಶ ಧರ್ಮ ಕೇವಳ, ಕಡಬ ಗ್ರಾ.ಪಂ. ಸದಸ್ಯ ಆದಂ ಕುಂಡೋಳಿ, ಇಂಜಿನಿಯರ್ ಶಾಜಿ, ಬೆಂಜಮಿನ್ ಡಿಸೋಜ, ಕಡಬ ಹೆಚ್.ಪಿ. ಪೆಟ್ರೋಲ್‍ನ ಸಿಬ್ಬಂದಿ ಸತ್ಯನ್, ಫ್ಯಾಷನ್ ಎಲಿಜನ್ಸ್ ಮಾಲಕ ಆಸೀಫ್, ವೆಲೇರಿಯನ್ ಡಿ.ಸೋಜ ಮಡಂತ್ಯಾರು ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು.
ಹೋಟೆಲ್‍ನ ಮಾಲಕರಾದ ಮಹಮ್ಮದ್ ಕಮಾಲ್ ಹಾಗೂ ಫಾರೂಕ್ ಆತೂರುರವರು ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿದರು. ಕರೀಂ ಕೆ.ಕೆ. ಹೊಸಮಠ, ಹಕೀಂ ಕಡಬ ಸಹಕರಿಸಿದರು. ನೂತನ ರೆಸ್ಟೋರೆಂಟ್ ನಲ್ಲಿ ಚಿಕನ್, ಮಟನ್, ಬಿರಿಯಾನಿ, ಅಲ್ – ಫಹಾಮ್, ತಂದೂರಿ, ಗ್ರಿಲ್ ಚಿಕನ್, ಶವರ್ಮಾ, ಗೋಬಿ, ಪನ್ನೀರ್, ಮಿಲ್ಕ್‌ಶೇಕ್, ಐಸ್ ಕ್ರೀಂ ಸೇರಿದಂತೆ ಸುಮಾರು ಇನ್ನೂರ ಐವತ್ತಕ್ಕೂ ಹೆಚ್ಚು ಬಗೆಯ ವಿವಿಧ ಸಸ್ಯಾಹಾರಿ – ಮಾಂಸಾಹಾರಿ ಖಾದ್ಯಗಳು ಲಭ್ಯವಿದ್ದು, 4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಚಿತ ಹೋಮ್ ಡೆಲಿವರಿ ಸೌಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.