ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನ

ಮಂಗಳೂರು ಮೇ 3( ನ್ಯೂಸ್ ಕಡಬ) newskadaba.com,) :- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ನೀಡಿಕೆಗೆ ಸಂಬಂಧಿಸಿದಂತೆ 2018 ನೇ ಸಾಲಿನಲ್ಲಿ ಅಂದರೆ ದಿನಾಂಕ:01.01.2018 ರಿಂದ ದಿನಾಂಕ:31.12.2018 ರವರೆಗಿನ ಅವಧಿಯಲ್ಲಿ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳನ್ನು ಹಾಗೂ ಅನುವಾದವನ್ನು ಕುರಿತ ಪುಸ್ತಕಗಳನ್ನು 2018 ನೇ ಸಾಲಿನ ಪುಸ್ತಕ ಬಹುಮಾನ ನೀಡಿಕೆಗಾಗಿ ಅರ್ಹ ಅನುವಾದಕರು/ಪ್ರಕಾಶಕರಿಂದ ಆಹ್ವಾನಿಸಲಾಗಿದೆ.ಕನ್ನಡದಿಂದ ಇತರ ಯಾವುದೇ ಭಾಷೆಗಾಗಲೀ ಇಲ್ಲವೇ ಇತರ ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ. 2018 ರ ಸಾಲಿನಲ್ಲಿ ಅನುವಾದ ಸಾಹಿತ್ಯವನ್ನು ಕುರಿತ ‘ಅಧ್ಯಯನ ಪುಸ್ತಕಗಳನ್ನು ಕೂಡ ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ. ಪ್ರಥಮಾವೃತ್ತಿಯಲ್ಲಿ 2018 ನೇ ಸಾಲಿನಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳ ಬಗ್ಗೆ ಮಾಹಿತಿ ಇರುವವರು ಸಹ ಪುಸ್ತಕಗಳನ್ನು ಕಚೇರಿಗೆ ಕಳುಹಿಸಿ  ಕೊಡಬಹುದಾಗಿದೆ.ಬಹುಮಾನಿತ ಕೃತಿಗಳಿಗೆ ಪ್ರಾಧಿಕಾರವು ನಿಗದಿಪಡಿಸಿದ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ.ಅನುವಾದಿತ ಪ್ರಕಟಣೆಗಳ ಒಂದು ಪ್ರತಿಯನ್ನು ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜ್ಞಾನ ಭಾರತಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056 ದೂ:23183311/12 ಕಚೇರಿಗೆ ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ ಮೇ 30 ರೊಳಗಾಗಿ ತಲುಪಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್.ಜಿ. ತಿಳಿಸಿದ್ದಾರೆ.

Also Read  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ➤ ಸಪ್ಟೆಂಬರ್ 17 ರಂದು 2019-20ನೇ ಸಾಲಿನ ದ.ಕ. ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

error: Content is protected !!
Scroll to Top