ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗೆ ಉತ್ತಮ ಫಲಿತಾಂಶ

ಕಡಬ ಮೇ 01( ನ್ಯೂಸ್ ಕಡಬ) newskadaba.com,);- “ಅಡ್ಯನಡ್ಕ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಡ್ಯನಡ್ಕದ ಜನತಾ ಪ್ರೌಢಶಾಲೆಯು 83.33 ಶೇ. ಹಾಗೂ ಜನತಾ ಆಂಗ್ಲಮಾಧ್ಯಮ ಶಾಲೆಯು 85.71 ಶೇ. ಫಲಿತಾಂಶ ಪಡೆದಿದೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾದ 30 ಮಂದಿಯಲ್ಲಿ 25 ಮಂದಿ ಹಾಗೂ ಆಂಗ್ಲಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾದ 7 ಮಂದಿಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ 4 ಮಂದಿ ಡಿಸ್ಟಿಂಕ್ಷನ್, 19 ಮಂದಿ ಪ್ರಥಮ ಶ್ರೇಣಿ ಪಡೆದಿದ್ದಾರೆ. ಆಂಗ್ಲಮಾಧ್ಯಮದಲ್ಲಿ 1 ಡಿಸ್ಟಿಂಕ್ಷನ್, 5 ಪ್ರಥಮ ಶ್ರೇಣಿ ಬಂದಿದೆ. ಜನತಾ ಪ್ರೌಢಶಾಲೆಯ ಪಂಚಮಿಕುಮಾರಿ ಬಿ. ಅತೀ ಹೆಚ್ಚು ಅಂದರೆ 595 ಅಂಕ (95.2 ಶೇ., ಎ ಪ್ಲಸ್ ಗ್ರೇಡ್) ಪಡೆದಿದ್ದು, ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿದ್ದಾಳೆ. ಜನತಾ ಆಂಗ್ಲಮಾಧ್ಯಮ ಶಾಲೆಯ ಅರುಣ್ ವಿ. 553 ಅಂಕ (88.48 ಶೇ., ಎ ಗ್ರೇಡ್) ಪಡೆದಿದ್ದಾರೆ. ಜನತಾ ಕನ್ನಡ ಮಾಧ್ಯಮ ಶಾಲೆಯ ಶ್ರಾವ್ಯ ಜಿ. 553 ಅಂಕ (88.48 ಶೇ, ಎ ಗ್ರೇಡ್), ಪ್ರಸಾದ್ ಕುಮಾರ್ ಎಸ್. 546 ಅಂಕ (87.36 ಶೇ, ಎ ಗ್ರೇಡ್), ಚರಣ್ರಾಜ್ ರೈ ಎಂ. 511 ಅಂಕ (81.76 ಶೇ, ಎ ಗ್ರೇಡ್) ಗಳಿಸಿದ್ದಾರೆ.

Also Read  ತಾಯಿ ಅಂತ್ಯಕ್ರಿಯೆ ನೆರವೇರಿಸಿದ ಪ್ರಧಾನಿ ಮೋದಿ

error: Content is protected !!
Scroll to Top