ಕಡಬ ಮೇ 02( ನ್ಯೂಸ್ ಕಡಬ) newskadaba.com,);- “ಸ್ಯಾಂಡ್ ಪಿಟ್ ಬೆಂಗರೆ, ಮಂಗಳೂರು, 1 ಮೇ 2019
ಮಂಗಳೂರಿನ ಹಳೆಯ ಕುಸ್ತಿ ಅಖಾಡ(ಗೋಧಾ)ಗಳಲ್ಲಿ ಒಂದಾದ ತುಳುನಾಡ ಕೇಸರಿ ಕುಸ್ತಿ ಪ್ರಶಸ್ತಿ ವಿಜೇತ ಬೆಂಗರೆ ವೀರಭಾರತಿ ವ್ಯಾಯಾಮ ಶಾಲೆಯ 93ನೇ ವಾರ್ಷಿಕೋತ್ಸವ ಮತ್ತು ಶ್ರೀ ಮಾರುತಿ ವಿಗ್ರಹ ಪ್ರತಿಷ್ಠಾಪನೆಯ ಸುವರ್ಣ ಸಂಭ್ರಮದ ಅಂಗವಾಗಿ ಮೇ 3ರಿಂದ ಮೇ 8ರ ತನಕ ಮಹಿಳೆಯರು ಹಾಗೂ ಪುರುಷರ ಕುಸ್ತಿ ಪಂದ್ಯಾಟ ಸಹಿತ ವೈವಿಧ್ಯಮಯ ಧಾರ್ಮಿಕ, ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಮೇ 3ರಂದು ಸಂಜೆ ಶ್ರೀಪಟ್ಟಾಭಿರಾಮ ದೇವರ ಬೆಳ್ಳಿಯ ನೂತನ ಮೂರ್ತಿಯೊಂದಿಗೆ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಮೇ4ರಂದು ಶನಿವಾರ ದಿ.ಗಂಗಾಧರ ಸ್ವರ್ಣ ದಾನರೂಪವಾಗಿ ಪ್ರತಿಷ್ಠಾಪನೆ ಮಾಡಿರುವ ಮಾರುತಿ ವಿಗ್ರಹದ ಸುವರ್ಣ ಸಂಭ್ರಮದ ಅಂಗವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಹಿಳೆಯರ ಮತ್ತು ಪುರುಷರ ಕುಸ್ತಿ ಪಂದ್ಯಾಟ ಆರಂಭವಾಗಲಿದೆ. ವೀರಭಾರತಿ ಕೇಸರಿ, ವೀರಭಾರತಿ ಕುಮಾರ್, ಮಾಸ್ಟರ್ ವೀರಭಾರತಿ, ವೀರಭಾರತಿ ಕುವರಿ ಹಾಗೂ ವಿವಿಧ ದೇಹತೂಕದ ಕುಸ್ತಿ ಪಂದ್ಯಾಟಗಳ ಸಮಾರೋಪ ಮೇ5ರಂದು ಭಾನುವಾರ ನಡೆಯಲಿದೆ. ಬೆಂಗರೆಯ ಕಡಲತೀರದಲ್ಲಿ ನಡೆಯುವ ಎರಡು ದಿನಗಳ ಕುಸ್ತಿ ಪಂದ್ಯಾಟದಲ್ಲಿ ಉಭಯ ಜಿಲ್ಲೆಗಳ ನೂರಾರು ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.ಕುಸ್ತಿ ಪಂದ್ಯಾಟವನ್ನು ಮುಂಬಯಿ ಉದ್ಯಮಿ ಅಜಿತ್ ಜಿ.ಸುವರ್ಣ ಉದ್ಘಾಟಿಸಲಿದ್ದು, ಮುಂಬಯಿ ಉದ್ಯಮಿಗಳಾದ ಗಣೇಶ್ ಕಾಂಚನ್, ಮಿತ್ತಮಲೆ ಗೋಪಾಲ್ ಸಾಲ್ಯಾನ್, ಸುಧಾಕರ ಕರ್ಕೇರ, ಮೋಗವೀರ ವ್ಯವಸ್ಥಾಪನಾ ಮಂಡಳಿಯ ಕೆ.ಎಲ್ ಬಂಗೇರ, ಲೀಡ್ಸ್ ಗ್ರೂಪ್ ಕಿಶೋರ್ ಡಿ.ಶೆಟ್ಟಿ, ಉಳ್ಳಾಲ ಮೋಗವೀರ ಸಭಾದ ಧ್ಯಕ್ಷ ಭರತ್ ಉಳ್ಳಾಲ್,, ಮಲ್ಪೆ ಶರತ್ ಎಲ್.ಕರ್ಕೇರ, ಭರತ್ ಕುಮಾರ್ ಕರ್ಕೇರ ಏರ್ಮಾಳ್, ಜಗದೀಶ ಬಂಗೇರ ಬೋಳೂರು, ದಕ ಅಮೆಚೂರು ಕುಸ್ತಿ ಸಂಘದ ಅಧ್ಯಕ್ಷ ಪ್ರಾಕಶ್ ಕರ್ಕೇರ, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ,ಒಲಿಂಪಿಕ್ ಸ್ಪೋರ್ಟ್ಸ್ ಮಾಲಕ ಮೋಹಮ್ಮದ್ ಶಮೀರ್ ಖಾದರ್, ಸತ್ಸ್ಯೋದ್ಯಮಿ ಸಿಂಧುರಾವ್ ಭಾಗವಹಿಸುವರು. ಈ ಸಂದ್ರಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಲಕ್ಷ್ಮಣ ಕುಂದರ್ ಅವರನ್ನು ಸನ್ಮಾನಿಸಲಾಗುವುದು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ವಹಿಸಲಿದ್ದು, ದಕ-ಉಡುಪಿ ಜಿಲಲಾ ಸಹಕಾರಿ ಮೀನು ಮಾರಾಟ ಫಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮುಖ್ಯ ಅತಿಥಿ ಆಗಿರುವರು. ಉದ್ಯಮಿ ಆನಂದ್ ಸಿ ಕುಂದರ್ ಕುಂದಾಪುರ, ವೇದ್ ಪ್ರಕಾಶ್ ಎಂ.ಶ್ರೀಯಾನ್ ಮುಂಬಯಿ, ಸದಾನಂದ ಎ.ಕೋಟ್ಯಾನ್, ಗೋಪಾಲ ಪುತ್ರನ್, ಜಯ ಸಿ.ಕೋಟ್ಯಾನ್, ಪ್ರಸಾದ್ ಕಾಂಚನ್, ಮೋಹನ ಬೆಂಗ್ರೆ, ಶಶಿಕುಮಾರ್ ಬೆಂಗ್ರೆ, ಅತ್ಲೆಟಿಕ್ ಕೋಚ್ ದಿನೇಶ್ ಕುಂದರ್, ಅಜಿತ್ ಜಿ.ಸುವರ್ಣ ಉಪಸ್ಥಿತರಿರುವರು.ಅಂದು ರಾತ್ರಿ ವಿಫಾರ್ ಖ್ಯಾತಿಯ ಕಾಮಿಡಿ ಪ್ರೀಮಿಯರ್ ಲೀಗ್ ತಂಡದಿಂದ ಬಲೇ ತೂಲೆ ಬಂಜಿನಿಲ್ಕೆ ತೆಲಿಪುಲೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.ಮೇ 7ರಂದು ಮಂಗಳವಾರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿ ಅವರು ಆಶೀರ್ವಚನ ಮತ್ಸ್ಯೋದ್ಯಮಿ ಭರತ್ ಭೂಷಣ್ ಬೋಳೂರು ಅವರ ಉಪಸ್ಥಿತಿಯಲ್ಲಿ ಪಟ್ಟಾಭಿರಾಮ ದೇವರ ಉಬ್ಬುಶಿಲ್ಪದ ಬಿಂಬ ಪ್ರತಿಷ್ಠೆ ನಡೆಯಲಿದೆ. ಮೇ. 8ರಂದು ಬುಧವಾರ ಧಾರ್ಮಿಕ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವ್ಯಾಯಾಮ ಶಾಲೆಯ ಆಡಳಿತ ಸಮಿತಿ ಅಧ್ಯಕ್ಷರಾದ ರಮಾನಂದ ಸುವರ್ಣ ತಿಳಿಸಿದ್ದಾರೆ.