ಮಂಗಳೂರು ಏಪ್ರಿಲ್ 30 ( ನ್ಯೂಸ್ ಕಡಬ) newskadaba.com,):- ರುಡ್‍ಸೆಟ್ ಸಂಸ್ಥೆಗೆ ಸಿಂಡಿಕೇಟ್‍ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ. ಖುರಾನರವರು ಭೇಟಿ ನೀಡಿ ಸಂಸ್ಥೆಯಲ್ಲಿ ನಡೆಯುತ್ತಿದ್ದ ಮೋಟಾರ್ ರೀವೈಂಡಿಂಗ್ ಮತ್ತು ಕಂಪ್ಯೂಟರೈಸ್ಡ್ ಅಕೌಂಟಿಂಗ್ ತರಬೇತಿ ಶಿಬಿರಾರ್ಥಿಗಳ ಜೊತೆ ಸಂವಾದ ನಡೆಸಿದರು. ಶಿಬಿರಾರ್ಥಿಗಳ ಅನಿಸಿಕೆ ಭಾಗವಹಿಸುವಿಕೆ ಕಂಡು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ತರಬೇತಿಯ ನಂತರ ನೀವು ಸ್ವಂತ ಉದ್ಯೋಗಿಯಾಗಿ ಮುಂದೆ ಉದ್ಯಮಿಗಳಾಗಿ ಬೆಳೆಯಿರಿ ಎಂದು ಹಿತವಚನ ನೀಡಿದರು. ಈ ಸಂದರ್ಭದಲ್ಲಿ ಅವರ ಧರ್ಮ ಪತ್ನಿಯವರು ಕೂಡ ಉಪಸ್ಥಿತರಿದ್ದರು. ರುಡ್‍ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಮ್. ಜನಾರ್ಧನ್, ನಿರ್ದೇಶಕ ವಿನಯ್ ಕುಮಾರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಅನಸೂಯ ಮತ್ತು ಅಬ್ರಹಾಂ ಜೇಮ್ಸ್, ಸಹಕರಿಸಿದರು.
ರುಡ್‍ಸೆಟ್ ಸಂಸ್ಥೆಗೆ ಸಿಂಡಿಕೇಟ್‍ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರ ಭೇಟಿ’
