ನೂಜಿಬಾಳ್ತಿಲ ಗ್ರಾ.ಪಂ. PDO ಅರಂತೋಡಿಗೆ ವರ್ಗಾವಣೆ

(ನ್ಯೂಸ್ ಕಡಬ) newskadaba.com ಕಡಬ, ಆ.03. ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಕಳೆದ ಮೂರು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಜಯಪ್ರಕಾಶ್ ರವರಿಗೆ ವರ್ಗಾವಣೆಯಾಗಿದ್ದು ನೂಜಿಬಾಳ್ತಿಲ ಪಂಚಾಯತಿಗೆ ಕಡಬ ಗ್ರಾ.ಪಂ.ನಲ್ಲಿ ಕಾರ್ಯದರ್ಶಿಯಾಗಿರುವ ಆನಂದ ಎ.ರವರನ್ನು ಪ್ರಭಾರ ಅಭಿವೃದ್ದಿ ಅಧಿಕಾರಿಯಾಗಿ ನೇಮಕಗೊಳಿಸಲಾಗಿದೆ.

ಕಳೆದ 3 ವರ್ಷದಿಂದ ನೂಜಿಬಾಳ್ತಿಲದಲ್ಲಿ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಪ್ರಕಾಶ್ ಎಂ.ರವರು ಸುಳ್ಯ ತಾಲೂಕಿನ ಆರಂತೋಡು ಪಂಚಾಯತಿಗೆ ವರ್ಗಾವಣೆಗೊಂಡಿದ್ದಾರೆ. ಬುಧವಾರದಂದು ಗ್ರಾ.ಪಂ.ನಲ್ಲಿ ಪ್ರಭಾರ ಅಭಿವೃದ್ದಿ ಅಧಿಕಾರಿಯವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

Also Read  ಇಂದಿನ ಹವಾಮಾನ; ದಕ್ಷಿಣ ಕನ್ನಡ, ಉಡುಪಿ ಸೇರಿ ಹಲವೆಡೆ ಗುಡುಗು ಸಹಿತ ಮಳೆ!

 

error: Content is protected !!
Scroll to Top