ಇಬ್ಬರು ಪುತ್ರಿಯರ ಜೊತೆ ಮಹಿಳೆ ನಾಪತ್ತೆ

ಮಂಗಳೂರು ಏಪ್ರಿಲ್ 29 ( ನ್ಯೂಸ್ ಕಡಬ) newskadaba.com,);- ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಸಂಜೀವಗೌಡ ಇವರ ಎರಡನೇ ಪತ್ನಿ ಜಾನಕಿ ಮತ್ತು ಆಕೆಯ ಮಕ್ಕಳಾದ ರಮ್ಯ, ರಕ್ಷ ಎಂಬವರು ಏಪ್ರಿಲ್ 25 ರಂದು ಮದ್ಯಾಹ್ನ 2 ಗಂಟೆಗೆ ಮನೆಯ ಹಿಂದಿನ ಬಾಗಿಲಿನಿಂದ ಹೊರಟು ಹೋದವರು ಮನೆಗೆ ಬಾರದೇ ಕಾಣೆಯಾಗಿರುವ ಬಗ್ಗೆ ಪ್ರಕರಣ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಾಣೆಯಾದ ಮಹಿಳೆಯ ಚಹರೆ ಇಂತಿವೆ: ಜಾನಕಿ ಎತ್ತರ 5 ಅಡಿ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಎಡ ಕೈ ನಡು ಬೆರಳು ಬೆಂಡಾಗಿದೆ, ಕೆಂಪು ಬಣ್ಣದ ಸೀರೆ, ಅರಸಿನ ಬಣ್ಣದ ರವಿಕೆ ಧರಿಸಿರುತ್ತಾರೆ, ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ.ಈ ಚಹರೆಯ ಮಹಿಳೆ ಪತ್ತೆಯಾದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08251-251055, ಜಿಲ್ಲಾ ನಿಸ್ತಂತು ವಿಭಾಗ ದೂರವಾಣಿ ಸಂಖ್ಯೆ: 0824-2220500 ಇಲ್ಲಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಉಪ್ಪಿನಂಗಡಿ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

Also Read  ಕಡಬದಲ್ಲಿ ನಸೀಬ್ ಬೋರ್ವೆಲ್ಸ್‌ ಮತ್ತು ಅರ್ಥ್ ಮೂವರ್ಸ್‌ ಶಾಖಾ ಕಚೇರಿ ಉದ್ಘಾಟನೆ

error: Content is protected !!
Scroll to Top