ಮಂಗಳೂರು ಏಪ್ರಿಲ್ 29 ( ನ್ಯೂಸ್ ಕಡಬ) newskadaba.com,);- ಏಪ್ರಿಲ್ 27 ರಂದು ಬೆಳಿಗ್ಗೆ 9 ಗಂಟೆಗೆ ಪಾವಂಜೆ ದೇವಸ್ಥಾನದ ಬಳಿ ಸೀತಾ ಅಮೀನ್ ಎಂಬವರ ಮನೆಯ ಸಮೀಪ ನಂದಿನಿ ನದಿ ಬದಿಯ ತೀರದ ಪೊದೆಯಲ್ಲಿ ಅಪರಿಚಿತ ಗಂಡಸಿನ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ವ್ಯಕ್ತಿಯ ಚಹರೆ ಇಂತಿವೆ; ಪ್ರಾಯ 35 ರಿಂದ 45 ವರ್ಷ, ಎತ್ತರ 5.5 ಅಡಿ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಮತ್ತು ಕೇಸರಿ ಮಿಶ್ರಿತ ಶರ್ಟ್, ಧರಿಸಿರುತ್ತಾರೆ. ಅಪರಿಚಿತ ಮೃತ ವ್ಯಕ್ತಿಯ ವಾರಿಸುದಾರರು ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆಗೆ ದೂರವಾಣಿ ಸಂಖ್ಯೆ: 0824-2290533, 9480805359, 9480805332 ಅಥವಾ ಮಂಗಳೂರು ಕಂಟ್ರೋಲ್ ರೂಮ್ 0824-2220800 ಇಲ್ಲಿಗೆ ಮಾಹಿತಿ ನೀಡಬೇಕಾಗಿ ಉಪ ನೀರಿಕ್ಷಕರು ಮುಲ್ಕಿ ಪೊಲೀಸ್ ಠಾಣೆ ಮಂಗಳೂರು ನಗರ ಇವರ ಪ್ರಕಟಣೆ ತಿಳಿಸಿದೆ.









