ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ – KARNAPEX 2019

            ಮಂಗಳೂರು ಏಪ್ರಿಲ್29 ( ನ್ಯೂಸ್ ಕಡಬ) newskadaba.com,):- ಅಕ್ಟೋಬರ್ 12 ರಿಂದ 15 ರವರೆಗೆ ಕರ್ನಾಟಕ ಅಂಚೆ ವೃತ್ತವು ಮಂಗಳೂರಿನಲ್ಲಿ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನವನ್ನು ಏರ್ಪಡಿಸಲು ತೀರ್ಮಾನಿಸಿದೆ. ಈ ಪ್ರದರ್ಶನಕ್ಕೆ KARNAPEX 2019”ಎಂದು ಹೆಸರಿಡಲಾಗಿದೆ. ಇದು 4 ವರ್ಷಗಳಿಗೊಮ್ಮೆ ನಡೆಯುವ ಪ್ರದರ್ಶನವಾಗಿದ್ದು ಮಂಗಳೂರಿನ ಚರಿತ್ರೆಯಲ್ಲೇ ಮೊತ್ತ ಮೊದಲ ಭಾರಿಗೆ ಆಯೋಜಿಸಲಾಗಿದೆ.ಈ ಪ್ರದರ್ಶನದಲ್ಲಿ ದೇಶ- ವಿದೇಶದ ಅಂಚೆ ಚೀಟಿಗಳು ಪ್ರದರ್ಶನಗೊಳ್ಳಲಿದ್ದು, ಸಹಸ್ರಾರು ಅಂಚೆ ಚೀಟಿ ಸಂಗ್ರಹಾಕಾರರು ಪಾಲ್ಗೊಳ್ಳಲಿದ್ದಾರೆ. ಈ ಪ್ರದರ್ಶನ ಲಾಂಛನದ ವಿನ್ಯಾಸಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಸಮಸ್ತ ನಾಗರೀಕರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಲಾಂಛನದ ವಿನ್ಯಾಸವು ಸ್ವಂತದ್ದಾಗಿರಬೇಕು ಹಾಗೂ ಆಯ್ಕೆಯಾದ ವಿನ್ಯಾಸವನ್ನು ಈ ಪ್ರದರ್ಶನದ ಲಾಂಛನವನ್ನಾಗಿ ಬಳಸಲಾಗುವುದು ಹಾಗೂ ಆಯ್ಕೆಯಾದ ಲಾಂಛನಕ್ಕೆ ರೂ. 5000/- ಮೊತ್ತದ ನಗದು ಬಹುಮಾನವನ್ನು ಕೂಡ ಮಾಡಲಾಗುವುದು.ಈ ಲೋಗೋ ಡಿಸೈನ್ ಅನ್ನು ” ಅಸಿಸ್ಟೆಂಟ್ ಡೈರೆಕ್ಟರ್(ಫಿಲಾಟೆಲಿ), ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕಛೇರಿ, ಕರ್ನಾಟಕ ವೃತ್ತ, ಬೆಂಗಳೂರು- 560001 ಕ್ಕೆ ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 20.ಹೆಚ್ಚಿನ ಮಾಹಿತಿಗಾಗಿ  ವೆಬ್ ಸೈಟ್ http://www.karnatakapost.gov.in/ download/ Design_a_logo_contest.pdf ನ್ನು ನೋಡಲು ಹಿರಿಯ ಅ0ಚೆ ಅಧೀಕ್ಷಕರು, ಮ0ಗಳೂರು ವಿಭಾಗ, ಮ0ಗಳೂರು 575002 ಇವರ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ

 

error: Content is protected !!
Scroll to Top