ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು ಏಪ್ರಿಲ್ 27 (ನ್ಯೂಸ್ ಕಡಬ) newskadaba.com,):- ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಕುರಿತು ಏಪ್ರಿಲ್ 26 ರಂದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ.ಸಭಾಂಗಣದಲ್ಲಿ ದಕ್ಷಿಣ ಕನ್ನಡ .ಜಿಲ್ಲೆಯ ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳ ಹಾಗೂ ಅರೆವೈದ್ಯಕೀಯ ಸಿಬ್ಬಂಧಿಯವರ ಪ್ರಗತಿ ಪರಿಶೀಲನಾ ಸಭೆಯು ಡಾ.ಮುನಿರಾಜು, ಜಂಟಿನಿರ್ದೇಶಕರು (ಕುಷ್ಠ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ .ಸೇವೆಗಳ ನಿರ್ದೇಶನಾಲಯ, ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಮುದಾಯದ ಜನರಲ್ಲಿ ಸಕ್ರಿಯಾ ಸಮೀಕ್ಷೆಯ ಮೂಲಕ ಸಂಪೂರ್ಣ ಕುಷ್ಠರೋಗ ನಿರ್ಮೂಲನೆ ಸಾಧಿಸಲು ಒತ್ತಿ ಹೇಳಿದರು. ರಾಜ್ಯದಲ್ಲಿಯೇ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿದಿರುವ ದಕ.ಜಿಲ್ಲೆಯಲ್ಲಿ ಇತರೆ ಜಿಲ್ಲೆಗಿಂತ ಕುಷ್ಠರೋಗವನ್ನು ನಿರ್ಮೂಲನೆಗೆ ಹೆಚ್ಚು ಒತ್ತು ನೀಡಲು ತಿಳಿಸಿದರು. ಪ್ರತಿ ತಿಂಗಳು 2-3 ಹೊಸ ಕುಷ್ಠರೋಗ ಪ್ರಕರಣಗಳು ವರದಿಯಾಗುತ್ತಿರುವುದನ್ನು ಗಮನಿಸಿದಾಗ ಜಿಲ್ಲೆಯ ಸಮುದಾಯದಲ್ಲಿ ಇನ್ನೂ ಸೊಂಕಿನ ಮೂಲ ಇರುವುದನ್ನು ಸಂಕೇತಿಸುತ್ತದೆ ಎಂದು ತಿಳಿಸಿದರು. ಅವರು ಕ್ಷೇತ್ರಮಟ್ಟದಲ್ಲೂ ಸಹ ಕುಷ್ಠರೋಗದ ಸಕ್ರಿಯ ಪತ್ತೆಯಲ್ಲಿ ಇನ್ನೂ ಹೆಚ್ಚು ಗಮನಹರಿಸಬೇಕಾಗಿರುವುದನ್ನು ಮತ್ತು ಹೆಚ್ಚಿನ ಅದ್ಯತೆ ಕೊಡಬೇಕಾಗಿರುವುದನ್ನು ತಮ್ಮ ಕ್ಷೇತ್ರಭೇಟಿಯಲ್ಲಿ ಗಮನಿಸಿರುವುದಾಗಿ ತಿಳಿಸಿದರು. ಜಿಲ್ಲೆಯ ಎಲ್ಲಾ ಹಂತದಲ್ಲೂ ಆಶಾ ಆಧಾರಿತ ಕುಷ್ಠರೋಗ ಸಮೀಕ್ಷೆಯ ಮೂಲಕ ಪ್ರಾರಂಭಿಕ ಹಂತದಲ್ಲಿಯೇ ಕುಷ್ಠರೋಗ ಪತ್ತೆ ಹಚ್ಚಲು ಹಾಗೂ ಪ್ರಾಮಾಣಿಕ ಚಿಕಿತ್ಸೆ ಕೊಡಲು ಹಾಗೂ ಆ ಮೂಲಕ ಜಿಲ್ಲೆಯಲ್ಲಿ ಕುಷ್ಠರೋಗ ನಿರ್ಮೂಲನೆ ಮಾಡಲು ಸಹಾಯವಾಗುತ್ತದೆ ಎಂದರು.ಸಮಾಜದಲ್ಲಿ ಕುಷ್ಠರೋಗದ ಬಗ್ಗೆ ಸಾಮಾಜಿಕ ಕಳಂಕ ಇನ್ನೂ ಜೀವಂತವಾಗಿರುವ ಬಗ್ಗೆ ಹಾಗೂ ಸಾಮಾಜಿಕ ಕಳಂಕ ನಿವಾರಣೆ ಮಾಡುವ ಬಗ್ಗೆ ಒತ್ತು ನೀಡಿದರು. ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಲು ತಿಳಿಸಿದರು. ಹೊಸದಾಗಿ ವರದಿಯಾದ ಕುಷ್ಠರೋಗ ಬಾಧಿತರ ಆರೋಗ್ಯ ಸಂಪರ್ಕಿಗಳಿಗೆ ಸೊಂಕಿಗೆ ತೆರೆದುಕೊಂಡ ನಂತರ ಕೊಡುವ ಚಿಕಿತ್ಸೆ(PEP)ಕೊಡುವುದರ ಮೂಲಕ ಆರೋಗ್ಯ ಸಂಪರ್ಕಿಗಳನ್ನು ಹಾಗೂ ಸಮುದಾಯವನ್ನು ಕುಷ್ಠರೋಗ ಸೊಂಕಿನಿಂದ ರಕ್ಷಿಸಬಹುದೆಂದು ತಿಳಿಸಿದರು. ಕುಷ್ಠರೋಗ ನಿರ್ಮೂಲನೆಯಲ್ಲಿ ಪ್ರಾಮಾಣಿಕವಾಗಿ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಲು ಎಲ್ಲಾ ವೈದ್ಯ/ಅರೆವೈದ್ಯಕೀಯ ಸಿಬ್ಬಂಧಿಗಳಿಗೆ ಪ್ರೇರೇಪಿಸಿದರು.ಡಾ ರತ್ನಾಕರ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ,ದಕ್ಷಿಣ ಕನ್ನಡ .ಮಂಗಳೂರು ಅವರು ಪ್ರಸ್ತಾವಿಕವಾಗಿ ಮಾತನಾಡಿ, ವಂದಿಸಿದರು.

Also Read  ಉಡುಪಿ : ಎಂಡಿಎಂಎ ಮಾತ್ರೆ ಪೂರೈಸುತ್ತಿದ್ದ ಡ್ರಗ್ಸ್ ಪೆಡ್ಲರ್ ವಿದ್ಯಾರ್ಥಿಯ ಅರೆಸ್ಟ್

error: Content is protected !!
Scroll to Top