(ನ್ಯೂಸ್ ಕಡಬ) newskadaba.com ಕಡಬ, ಆ.03. ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಾಮನಿರ್ದೇಶಿತ ಸದಸ್ಯರಾಗಿ ಕಡಬ ಪಣೆಮಜಲು ಮನೆತನದ, ಕೊಂಬಾರು ಹೊಳ್ಳಾರು ರಾಮಕೃಷ್ಣ ಹೊಳ್ಳಾರ್ ನೇಮಕಗೊಂಡಿದ್ದಾರೆ.
ಪುತ್ತೂರು ಶಾಸಕಿ, ರಾಜ್ಯ ಸರ್ಕಾರದ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಈ ನೇಮಕ ಮಾಡಿದೆ. ರಾಮಕೃಷ್ಣ ಹೊಳ್ಳಾರುರವರು ಮೆಸ್ಕಾಂ ಕಡಬ ಶಾಖಾ ಸಲಹಾ ಸಮಿತಿ ಸದಸ್ಯರಾಗಿ, ಕೆಂಜಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ, ಕೊಂಬಾರು ಮುಗೇರಡ್ಕ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕೊಂಬಾರು ಗ್ರಾಮದ ಹೊಳ್ಳಾರು ನಿವಾಸಿ ಸಂಕಪ್ಪ ಗೌಡ ಹಾಗೂ ಚಂದ್ರಾವತಿ ದಂಪತಿ ಪುತ್ರ.