ತಂತ್ರಜ್ಞಾನ ಮಧ್ಯಸ್ಥಿಕೆಯಿಂದ ತೋಟಗಾರಿಕೆ ಬೆಳೆಗಳ ಉತ್ಪಾದನೆ ವೃದ್ಧಿಸಲು ಉತ್ತೇಜನ : ಡಾ| ಎ.ಟಿ. ರಾಮಚಂದ್ರ ನಾಯ್ಕ

ಮಂಗಳೂರು ಏಪ್ರಿಲ್ 26 (ನ್ಯೂಸ್ ಕಡಬ) newskadaba.com,) :- ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರವು ಬಂಟ್ವಾಳ ತಾಲ್ಲೂಕಿನ ತೋಟಗಾರಿಕಾ ಇಲಾಖೆ ಮತ್ತು ವಿಟ್ಲದ ಪಿಂಗಾರ ರೈತ ಉತ್ಪಾದಕರ ಕಂಪನಿಗಳ ಸಹಯೋಗದಿಂದ ರೈತಾಭಿವೃದ್ಧಿ ಸದಸ್ಯರುಗಳಿಗೆ ಅಡಿಕೆ, ತೆಂಗು ಮತ್ತು ಕಾಳುಮೆಣಸು ಬೆಳೆಗಳ ವೈಜ್ಞಾನಿಕ ಕೃಷಿಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಬಂಟ್ವಾಳ ತಾಲ್ಲೂಕಿನ ವಿಟ್ಲದಲ್ಲಿ ಏರ್ಪಡಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಯವರು ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕಾದರೆ ಮೌಲ್ಯವರ್ಧನೆ ಮಾಡಿ ಅಧಿಕ ಲಾಭಗಳಿಸಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರೈತಾಭಿವೃದ್ಧಿ ಸದಸ್ಯರುಗಳಿಗಾಗಿಯೇ ಆಯೋಜಿಸಿರುವ ಈ ವಿಶೇಷ ಕಾರ್ಯಾಗಾರವು ಪಿಂಗಾರ ಸಂಸ್ಥೆಯ ಸದಸ್ಯ ರೈತರುಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಮತ್ತು ಇಲ್ಲಿ ಭೋದಿಸುವ ವಿಷಯಗಳ ಬಗ್ಗೆ ವಿಷಯ ತಜ್ಞರುಗಳ ಜೊತೆ ಸಮಾಲೋಚನೆ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಕರೆ ನೀಡಿದರು.ಮುಖ್ಯ ಅತಿಥಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು ಈ ಕಾರ್ಯಕ್ರಮದ ಉದ್ದೇಶ ಹಾಗೂ ಗುರಿಗಳನ್ನು ತಿಳಿಸಿದರು. ತಂತ್ರಜ್ಞಾನದ ಮಧ್ಯಸ್ಥಿಕೆಯಿಂದ ತೋಟಗಾರಿಕೆ ಉತ್ಪಾದನೆಯನ್ನು ಉತ್ತೇಜಿಸುವುದು ಈ ಕಾರ್ಯಾಗಾರದ ಮೂಲ ಉದ್ದೇಶವಾಗಿದೆ. ಉತ್ಪಾದನೆಗೊಂಡ ಬೆಳೆಗಳ ಮೌಲ್ಯಗಳನ್ನು ಹೆಚ್ಚಿಸುವುದು, ಆದಾಯ ದ್ವಿಗುಣಗೊಳಿಸುವುದು, ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಉತ್ತಮ ರೀತಿಯಲ್ಲಿ ಆಧುನಿಕ ಕೃಷಿ ಮೌಲ್ಯ ಸರಪಣಿ ಏಕೀಕರಿಸುವುದರೊಂದಿಗೆ ಗ್ರಾಮೀಣ ಜೀವನೋಪಾಯವನ್ನು ಸುಧಾರಿಸುವುದು ಹಾಗೂ ತಾಂತ್ರಿಕ ಮತ್ತು ಕ್ಷೇತ್ರ ಮಟ್ಟದ ಬೆಂಬಲ ವಿಸ್ತರಿಸುವುದು ಈ ಕಾರ್ಯಾಗಾರದ ಮುಖ್ಯ ಗುರಿ ಎಂದು ಹೇಳಿದರು.ತೋಟಗಾರಿಕಾ ಇಲಾಖೆಯ ನಿರ್ದಿಷ್ಟ ಗುರಿಗಳಾದ ತಾಂತ್ರಿಕ ನೆರವು ಒದಗಿಸುವುದು, ರೈತಾಭಿವೃದ್ಧಿ ಸದಸ್ಯರಿಗೆ ಪ್ರಾತ್ಯಕ್ಷತೆ ಮತ್ತು ನಿರ್ದಿಷ್ಟ ಬೆಳೆಯ ಕುರಿತು ತರಭೇತಿ ನೀಡುವುದು, ಸುಧಾರಿತ ತಂತ್ರಜ್ಞಾನ ಕುರಿತು ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದು, ಸಾಮಥ್ರ್ಯ ಅಭಿವೃದ್ಧಿಗೆ ಅಗತ್ಯವಿರುವ ತರಭೇತಿ ನೀಡುವುದು, ಕೀಟ/ರೋಗಗಳ ಹಾವಳಿ ತೀವ್ರಗೊಂಡಾಗ ಅತೀ ತುರ್ತಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಅಗತ್ಯ ತಾಂತ್ರಿಕ ಮಾಹಿತಿ ಒದಗಿಸುವುದು ಹಾಗೂ ಅಭಿವೃದ್ಧಿ ಮತ್ತು ಪುಷ್ಟಿಗೆ ಅಗತ್ಯವಿರುವ ಚಟುವಟಿಕೆಗಳನ್ನು ಕೈಗೊಳ್ಳುವುದು ಇತ್ಯಾದಿಗಳನ್ನು ನಡೆಸುವುದು ಮುಖ್ಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಟ್ಲದ ಪಿಂಗಾರ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ರಾಮಕಿಶೋರ್ ಕೆ. ರವರು ಮಾತನಾಡಿ, ರೈತಾಭಿವೃದ್ಧಿ ಕೃಷಿಕರಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮವು ಉತ್ತಮವಾದುದ್ದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರುಗಳು ಭಾಗವಹಿಸಿ ಇದರ ಪ್ರಯೋಜನ ಪಡೆಯಲು ಸೂಚಿಸಿದರು.ವಿಟ್ಲದ ಕೇಂದ್ರಿಯ ತೋಟಗಾರಿಕಾ ಬೆಳೆಗಳ ಸಂಶೋದನಾ ಸಂಸ್ಥೆಯ ವಿಜ್ಞಾನಿ ಡಾ| ಎಲ್. ಆರ್. ನಾಗರಾಜ ಮತ್ತು ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿ ಹರೀಶ್ ಶೆಣೈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಅಡಿಕೆ, ತೆಂಗು ಮತ್ತು ಕಾಳುಮೆಣಸು ಬೆಳೆಗಳ ವೈಜ್ಞಾನಿಕ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮೀನುಗಾರಿಕಾ ವಿಜ್ಞಾನಿ ಗಣೇಶ್‍ಪ್ರಸಾದ್ ಎಲ್. ವಂದಿಸಿದರು. ಕೃಷಿ ವಿಜ್ಞಾನ ಕೇಂದ್ರದ ಸಹಾಯಕಿ ಯಶಶ್ರೀ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜನಾರ್ಧನ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!

Join the Group

Join WhatsApp Group