ಕಡಬ ಏಪ್ರಿಲ್ 25 (ನ್ಯೂಸ್ ಕಡಬ) newskadaba.com,):- ಕುಟ್ರುಪಾಡಿ ಗ್ರಾಮದಲ್ಲಿ ಏ.24ರಂದು ಬೀಸಿದ ಗಾಳಿ ಹಾಗೂ ಸಿಡಿಲಿಗೆ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾದ ಘಟನೆ ನಡೆದಿದೆ.ಕುಟ್ರುಪಾಡಿಯ ಅನ್ನಮ್ಮ ವರ್ಗೀಸ್ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಲು ಹಾನಿಗೊಂಡಿವೆ ಅಲ್ಲದೆ ಮನೆಯ ವಿದ್ಯುತ್ ಸಂಪರ್ಕಗಳಿಗೂ ಹಾನಿಯಾಗಿ ಮನೆಯ ಗೋಡೆ ಬಿರುಕು ಬಿಟ್ಟಿದೆ. ಕುಟ್ರುಪಾಡಿ ಗ್ರಾಮದ ದೋಣಿಗಂಡಿ ಎಂಬಲ್ಲಿ ಬಾಲಕೃಷ್ಣ ಎಂಬವರ ಹಟ್ಟಿಯ ಛಾವಣಿ ಗಾಳಿಗೆ ಹಾರಿ ಹೊಗಿದೆ ಈ ಬಗ್ಗೆ ಅವರು ಕಂದಾಯ ಇಲಾಖೆಗೆ ದೂರು ನೀಡಿದ್ದಾರೆ.
Also Read ಸೆ.16: ಕಡಬ ವಲಯ ಒಕ್ಕಲಿಗ ಗೌಡ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ► ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನೆ