ನಂಬಿಗರ ಅಂಬಿಗ -ನಾಟಕ ಪ್ರದರ್ಶನ

ಮಂಗಳೂರು ಏಪ್ರಿಲ್ 25 (ನ್ಯೂಸ್ ಕಡಬ) newskadaba.com,):- ಅಂಬಿಗರ ಚೌಡಯ್ಯ ಅಧ್ಯಯನ ಪೀಠವು 2018-19ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅಂಬಿಗರ ಚೌಡಯ್ಯನವರ ಬದುಕು ಮತ್ತು ಅವರ ವಚನಗಳ ಮೌಲ್ಯಗಳನ್ನು ಪರಿಚಯಿಸುವ ಸದುದ್ಧೇಶದಿಂದ ನಂಬಿಗರ ಅಂಬಿಗ ಎಂಬ ನಾಟಕ ಪ್ರದರ್ಶನವನ್ನು ಏಪ್ರಿಲ್ 27 ರಂದು ಸಂಜೆ 7 ಗಂಟೆಗೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ಆಯೋಜಿಸಲಾಗಿದೆ. ಡಾ, ನರಸಿಂಹ ಮೂರ್ತಿ.ಆರ್ ವಿಶ್ರಾಂತ ಪ್ರಾಧ್ಯಾಪಕರು, ಮಂಗಳೂರು ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಕಿಶೋರಿ ನಾಯಕ್.ಕೆ ಪ್ರಭಾರ ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಲಯ ಇವರು ವಹಿಸಿಕೊಳ್ಳಲಿದ್ದಾರೆ.

Also Read  ಶಿರಾಡಿ: ಒಂಟಿಸಲಗ ದಾಳಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ

error: Content is protected !!
Scroll to Top