ತುಳು ಅಕಾಡೆಮಿ ಪ್ರಕಟಿತ ಪುಸ್ತಕ ಬಿಡುಗಡೆ ಸಮಾರಂಭ

ಮಂಗಳೂರು ಏಪ್ರಿಲ್ 25 (ನ್ಯೂಸ್ ಕಡಬ) newskadaba.com,):- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ತುಳುಭವನದ ಸಿರಿಚಾವಡಿಯಲ್ಲಿ ಎಪ್ರಿಲ್ 27 ರಂದು ಅಪರಾಹ್ನ 3.30 ಗಂಟೆಗೆ ಅಕಾಡೆಮಿ ಪ್ರಕಟಿತ ಶ್ರೀ ಮುದ್ದು ಮೂಡು ಬೆಳ್ಳೆ ರವರ ತುಳು ನಾಟಕ ಪರಂಪರೆ ಮತ್ತು ಅನುವಾದಕರಾದ ಡಾ.ಪ್ರಮಿಳಾ ಮಾಧವ್ ರವರ ಶಿಕಾರಿ (ಮೂಲ ಲೇ: ಶ್ರೀಮತಿ ಲಲಿತಾ ರೈ) ಕೃತಿ ಬಿಡುಗಡೆ ಸಮಾರಂಭವು ನಡೆಯಲಿದೆ.ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿ ವಹಿಸಲಿದ್ದಾರೆ. ಉಡುಪಿ ರಥಬೀದಿ ಗೆಳೆಯರು (ರಿ) ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಮತ್ತು ಉಡುಪಿಯ ಎರ್ಮಾಳು ಬಡಾ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜ್ಯೋತಿ ಚೇಳಾೈರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ.ಭಂಡಾರಿ ಇವರ ಪ್ರಕಟಣೆ ತಿಳಿಸಿದೆ.

Also Read  ಮುಂಬೈ: ಶಾಪಿಂಗ್‌ ಮಾಲ್‌ ನಲ್ಲಿ ಬೆಂಕಿ ಅವಘಡ ➤3,500 ಜನರ ಸುರಕ್ಷತವಾಗಿ ಸ್ಥಳಾಂತರ...!

error: Content is protected !!
Scroll to Top