ಅಲ್ಪಾವಧಿ ಟೆಂಡರ್ ಆಹ್ವಾನ

ಮಂಗಳೂರು ಏಪ್ರಿಲ್ 24 (ನ್ಯೂಸ್ ಕಡಬ) newskadaba.com,):- ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ ಮಂಗಳೂರು, ದಕ್ಷಿಣ ಕನ್ನಡ .ಜಿಲ್ಲೆ ಇಲ್ಲಿಗೆ 2019-20 ನೇ ಸಾಲಿನ (ಎಪ್ರಿಲ್ 2019 ರಿಂದ ಮಾರ್ಚ್2020 ರವರೆಗೆ) ಒಂದು ವರ್ಷದ ಅವಧಿವರೆಗೆ ಅಧಿಕೃತ ಸರಕಾರಿ ಕೆಲಸಕ್ಕಾಗಿ ಗುತ್ತಿಗೆ ಆಧಾರದಲ್ಲಿ ( ದಿನಾಂಕ 01-01-2014 ರ ನಂತರದ ಮಾದರಿಯ) ವಾಹನ ಸೇವೆ (ಇಂಡಿಕಾ ಕಾರು/ ಇಂಡಿಗೋ/ಮಾಂಝ) ಯನ್ನು ಪಡೆಯುವ ಬಗ್ಗೆ ಅಧಿಕೃತ ವಾಹನ ಮಾಲಕರಿಂದ ನಮೂನೆ -1 ಮತ್ತು ನಮೂನೆ -2 ರಲ್ಲಿ ಪ್ರತ್ಯೇಕವಾಗಿ ಮೊಹರು ಮಾಡಿದ ಟೆಂಡರುಗಳನ್ನು ಆಹ್ವಾನಿಸಲಾಗಿದೆ. ಟೆಂಡರು ಸಲ್ಲಿಸಲು ಇಚ್ಛಿಸುವವರು ಟೆಂಡರು ಫಾರ್ಮುಗಳಿಗಾಗಿ ರೂಪಾಯಿ 100 ನ್ನು ಕಚೇರಿ ಅವಧಿಯಲ್ಲಿ ಪಾವತಿಸಿ ಫಾರ್ಮ್‍ಗಳನ್ನು ಪಡೆಯಬಹುದಾಗಿದೆ. ಟೆಂಡರು ಸಲ್ಲಿಸಲು ಕೊನೆಯ ಮೇ 25 ಅಪರಾಹ್ನ 12 ಗಂಟೆ ಆಗಿದೆ.ಹೆಚ್ಚಿನ ವಿವರಗಳಿಗೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಕಚೇರಿ ದೂರವಾಣಿ ಸಂಖ್ಯೆ: 0824-2451264 ಸಂಪರ್ಕಿಸಬಹುದಾಗಿದೆ. ಎಂದು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಪ್ರಕಟಣೆ ತಿಳಿಸಿದೆ.

Also Read  18ವರ್ಷ ತುಂಬಿದವರು ಹಕ್ಕು ಚಲಾಯಿಸಲು ಅಪರ ಜಿಲ್ಲಾಧಿಕಾರಿ ಕರೆ

 

error: Content is protected !!
Scroll to Top