ಮಂಗಳೂರು ಏಪ್ರಿಲ್ 24 (ನ್ಯೂಸ್ ಕಡಬ) newskadaba.com,):- ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಗೊಳಪಡುವ ಮಾಜಿ ಸೈನಿಕರ ಹಾಗೂ ಯುದ್ದ ಕಾರ್ಯಾಚರಣೆಯಲ್ಲಿ ಮಡಿದ ಯೋಧರ ಅವಲಂಬಿತರಿಗೆ ಗುರುತು ಚೀಟಿಯನ್ನು ವಿತರಿಸುವ ಕ್ರಮ ಜಾರಿಗೆ ಬಂದಿದೆ.ಗುರುತು ಚೀಟಿಯನ್ನು ಪಡೆಯಲು ಇಚ್ಚಿಸುವವರು ಸಂಬಂಧಿಸಿದ ದಾಖಲೆಗಳ ಮಾಹಿತಿ ಮತ್ತು ಅರ್ಜಿ ನಮೂನೆಯನ್ನು ಪಡೆಯಲು ಕಾರ್ಯಾಲಯಕ್ಕೆ ಖುದ್ದಾಗಿ ಕಚೇರಿ ವೇಳೆಯಲ್ಲಿ ಬಂದು ಪಡೆಯಬಹುದಾಗಿದೆ ಎಂದು ಜಂಟಿ ನಿರ್ದೇಶಕರ ಕಾರ್ಯಾಲಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
ಮಾಜಿ ಸೈನಿಕ, ಮಡಿದ ಯೋಧರ ಅವಲಂಬಿತರಿಗೆ ಗುರುತು ಚೀಟಿ ವಿತರಣೆ
