ಕಡಬ: ತೀವ್ರ ತರದ ಜ್ವರಕ್ಕೆ ಮಹಿಳೆ ಬಲಿ

(ನ್ಯೂಸ್ ಕಡಬ) newskadaba.com ಕಡಬ, ಆ.03. ಕಡಬ ಗ್ರಾಮದ ಪಿಜಕ್ಕಳ ಲಕ್ಷ್ಮೀನಾರಾಯಣ ಆಚಾರಿ ಎಂಬವರ ಪತ್ನಿ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಸುಗುಣ(35) ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಕಳೆದೊಂದು ವಾರದಿಂದ ತೀವ್ರ ತರದ ಜ್ವರದಿಂದ ಬಳಲುತ್ತಿದ್ದ ಸುಗುಣರವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರದಂದು ಮೃತರಾಗಿದ್ದಾರೆ. ಇವರು ಪತಿ ಲಕ್ಷ್ಮೀ ನಾರಾಯಣ, ಪುತ್ರ ರೀತೇಶ್ ಹಾಗೂ ಪುತ್ರಿ ಜ್ಯೋತಿಕಾರನ್ನು ಅಗಲಿದ್ದಾರೆ.

error: Content is protected !!
Scroll to Top