ಮಂಗಳೂರು ಏಪ್ರಿಲ್ 22(ನ್ಯೂಸ್ ಕಡಬ) newskadaba.com, :- ಹೆಚ್1 ಎನ್1 ಸಾಮಾನ್ಯ ವೈರಸ್ ಜ್ವರವಾಗಿದ್ದು ನಿರ್ದಿಷ್ಟ ಮತ್ತು ಸೂಕ್ತ ಚಿಕಿತ್ಸೆಯಿಂದ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವರು. ತೀವೃ ಸ್ವರೂಪದ ಜ್ವರ, ಕೆಮ್ಮು, ಕಫ, ಶೀತ ಮತ್ತು ಗಂಟಲು ಕೆರೆತ ಮೈಕೈ ನೋವು ವಾಂತಿ ಭೇದಿ, ಉಸಿರಾಟದ ತೊಂದರೆ ಎಚ್1 ಎನ್1 ಸೋಂಕಿನ ಲಕ್ಷಣಗಳಾಗಿದ್ದು, ಭಾದಿತರು ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯಿರಿ. ಸೋಂಕಿತರು ಕೆಮ್ಮಿದಾಗ, ಸೀನಿದಾಗ ವೈರಸ್‍ಗಳು ಹರಡುತ್ತವೆ. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಿ, ಕೈಗಳ ಶುಚಿತ್ವ ಸೇರಿದಂತೆ ವೈಯುಕ್ತಿಕ ಶುಚಿತ್ವ ಕಾಪಾಡಿ. ಸೋಂಕಿತರ ಗಂಟಲು ಸ್ರಾವದ ಲೇಪನವನ್ನು ಸಂಗ್ರಹಿಸಿ ಪ್ರಯೋಗ ಶಾಲೆಯಲ್ಲಿ ಪರೀಕ್ಷಿಸಿ ಎಚ್1 ಎನ್1 ಸೋಂಕು ದೃಡಪಡಿಸಲಾಗುತ್ತದೆ. ಎಚ್1 ಎನ್1 ಸೋಂಕಿಗೆ ಅಚಿಠಿ.ಔseಟಣಚಿmiviಡಿ (ಖಿಚಿmiಜಿಟu) ಅಥವಾ Zಚಿಟಿಚಿmiviಡಿ ಔಷಧಿಯನ್ನು ವೈದ್ಯರ ಸಲಹೆಯ ಮೇರೆಗೆ ಪಡೆಯ ಬಹುದು. ಪೌಷ್ಠಿಕ ಆಹಾರ ಸೇವಿಸಿ, ಧಾರಳವಾಗಿ ನೀರು ಕುಡಿಯಿರಿ, ಜನ ಸಂದಣಿ ಪ್ರದೇಶಗಳಿಗೆ ಭೇಟಿ ನೀಡುವಾಗ ಸಾಕóóಷ್ಟು ಮುಂಜಾಗ್ರತೆ ವಹಿಸಿ. ಪ್ಲೂ ತರಹದ ಲಕ್ಷಣಗಳಿರುವ ಮಕ್ಕಳನ್ನು ಶಾಲೆಗೆ ಕಳುಹಿಸದೇ ವೈದ್ಯರ ಸಲಹೆಯಂತೆ ಚಿಕಿತ್ಸೆ, ವಿಶ್ರಾಂತಿ ಪಡೆಯಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸರ್ವೇಕ್ಷಣಾ ಘಟಕ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ದೂರವಾಣಿ ಸಂಖ್ಯೆ::0824-2420466, ಯನ್ನು ಸಂಪರ್ಕಿಸಬಹುದು.