ಬಂಟ್ವಾಳ: ನಕಲಿ ಮತ ಚಲಾಯಿಸುತ್ತಿದ್ದ ಪ್ರತ್ಯೇಕ ಪ್ರಕರಣ ಪತ್ತೆ ➤ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.19. ಬೇರೆಯವರ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಯತ್ನಿಸುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಮತಗಟ್ಟೆ ಅಧಿಕಾರಿಗಳು ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಬಂಟ್ವಾಳದಲ್ಲಿ ಸಂಭವಿಸಿದೆ.

 

ಬಂಟ್ವಾಳ ವಿಧಾನಸಭಾ ಕ್ಷೇತ್ರದ 177 ನೇ ಮತಗಟ್ಟೆಯಲ್ಲಿ ಮಜೀದ್ ರಹಿಮಾನ್ ಎಂಬವರ ಹೆಸರಿನಲ್ಲಿ ಮತ ಚಲಾಯಿಸಲು ಯತ್ನಿಸಿದ ಆರೋಪಿ ಕಲ್ಲಡ್ಕ ರಾಮನಗರ ನಿವಾಸಿ ಜಿ.ಕೆ.ಅಬ್ದುಲ್ಲಾ ಎಂಬವರ ಪುತ್ರ ಮಹಮ್ಮದ್ ಶಾಫಿ(23)ಯನ್ನು ಬಂಧಿಸಲಾಗಿದೆ.

123ನೇ ಮತಗಟ್ಟೆಯಲ್ಲಿ ಆಸಿಫ್ ಅಲಿ ಎಂಬವರ ಹೆಸರಿನಲ್ಲಿ ಮತದಾನಕ್ಕೆ ಯತ್ನಿಸುತ್ತಿದ್ದ ಬಂಟ್ವಾಳ ಪರ್ಲಿಯಾ ನಿವಾಸಿ ಶಾಹುಲ್ ಹಮೀದ್ ಎಂಬವರ ಪುತ್ರ ಮಹಮ್ಮದ್ ಶಫೀಕ್(19) ನನ್ನು ಬಂಧಿಸಲಾಗಿದೆ.

Also Read  ಕಲ್ಲಡ್ಕ: ಮುಗಿಯದ ರಸ್ತೆ ಹೊಂಡದ ಸಂಕಟ ➤‌ ಪ್ರಯಾಣಿಕ ಬೆಳ್ಳಾರೆಯ ಯುವಕನ ಸೊಂಟ ಮುರಿತ

ಮೂರನೇ ಪ್ರಕರಣದಲ್ಲಿ ಮತಗಟ್ಟೆ ಸಂಖ್ಯೆ 122 ರಲ್ಲಿ ಎರಡನೇ ಸಲ ಮತ ಚಲಾಯಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಮತಗಟ್ಟೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅನ್ವರ್ (30) ಎಂದು ಗುರುತಿಸಲಾಗಿದೆ. ಆರೋಪಿಯ ಹೆಸರು ಮತದಾರರ ಪಟ್ಟಿಯಲ್ಲಿ ಎರಡು ಸಲ ನಮೂದಾಗಿದ್ದು, ಒಂದು ಹೆಸರಿನಲ್ಲಿ ಬೆಳಿಗ್ಗೆ ಮತ ಚಲಾಯಿಸಿ ಆ ಬಳಿಕ ಶಾಯಿಯನ್ನು ಅಳಿಸಿ ಎರಡನೇ ಬಾರಿ ಮತ ಚಲಾಯಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಒಟ್ಟು ಪ್ರಕರಣಗಳ ಬಗ್ಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Also Read  ವಿಟ್ಲ: ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆ..!! ➤ ಕೊಲೆ ಅಥವಾ ಅಪಘಾತ ಶಂಕೆ

error: Content is protected !!
Scroll to Top