ಕೊಯಿಲ: ಹಸೆಮಣೆ ಏರಿದ ಬಳಿಕ ಮತ ಚಲಾಯಿಸಿದ ಮದುಮಗ ➤ ಪತ್ನಿಯೊಂದಿಗೆ ಸಬಳೂರು ಮತಗಟ್ಟೆಗೆ ಆಗಮಿಸಿದ ಗಿರೀಶ್

(ನ್ಯೂಸ್ ಕಡಬ) newskadaba.com ಕಡಬ, ಎ.18. ಲೋಕಸಭಾ ಚುನಾವಣೆಯಂದೇ ಹಸೆಮಣೆ ಏರಿದ ಯುವಕನೋರ್ವ ಸಂಜೆ ವೇಳೆಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ಘಟನೆ ಕಡಬ ತಾಲೂಕಿನ ಕೊಯಿಲದಲ್ಲಿ ನಡೆದಿದೆ.

ಖಂಡಿಗ ನಿವಾಸಿ ಗಿರೀಶ್ ಗುರುವಾರದಂದು ಬೆಳ್ತಂಗಡಿ ಮೂಲದ ಅಶ್ವಿನಿಯವರೊಂದಿಗೆ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಸೆಮಣೆ ಏರಿದ್ದು, ಸಂಜೆ ವೇಳೆಗೆ ಕೊಯಿಲ ಗ್ರಾಮದ ಸಬಳೂರು ಬೂತ್ ನಲ್ಲಿ ತನ್ನ ಹಕ್ಕನ್ನು ಚಲಾಯಿಸಿದರು. ನವವಧು ಅಶ್ವಿನಿ ಬೆಳ್ತಂಗಡಿಯಲ್ಲೇ ಗುರುವಾರ ಬೆಳಿಗ್ಗೆ ಮತ ಹಾಕಿ ಮದುವೆ ಮಂಟಪಕ್ಕೆ ಆಗಮಿಸಿದ್ದರು.

Also Read  ಚಂದ್ರಗ್ರಹಣ ಹಿನ್ನೆಲೆ ➤‌ ನ.8ರಂದು ಈ ದೇವಾಲಯಗಳು ಬಂದ್

error: Content is protected !!
Scroll to Top