ಬಿಳಿನೆಲೆ ಮತಗಟ್ಟೆಯ ಸಿಬ್ಬಂದಿಗಳ ಉಪಾಹಾರಾದ ತಟ್ಟೆಯಲ್ಲಿ ಹಲ್ಲಿ ಪತ್ತೆ ➤ ಅಸ್ವಸ್ಥಗೊಂಡ ಸಿಬ್ಬಂದಿಗಳು ಪುತ್ತೂರು ಆಸ್ಪತ್ರೆಗೆ ➤ ಸತ್ತ ಹಲ್ಲಿಯ ಸುತ್ತ ಸಂಶಯದ ಹುತ್ತ..!!

(ನ್ಯೂಸ್ ಕಡಬ) newskadaba.com ಕಡಬ, ಎ.18. ಇಲ್ಲಿನ ಬಿಳಿನೆಲೆ ಮತಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಬೆಳಗ್ಗಿನ ಉಪಹಾರದಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದ್ದು, ಆಹಾರವನ್ನು ಸೇವಿಸಿದ ಹಲವರ ಪೈಕಿ ಇಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐವರ್ನಾಡು ನಿವಾಸಿ ಜಯಪ್ರಕಾಶ್ ಗೌಡ(35), ಬೆಳ್ಳಾರೆ ನಿವಾಸಿ ರಾಜೇಂದ್ರ(45) ಅಸ್ವಸ್ಥಗೊಂಡವರು. ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಹೊಟೇಲಿನಿಂದ ತರಿಸಲಾಗಿದ್ದು, ಹಲವು ಅಧಿಕಾರಿಗಳು ಇದೇ ಆಹಾರವನ್ನು ಸೇವಿಸಿದ್ದಾರೆ‌. ಆದರೆ ಸ್ಥಳೀಯರ ಮಾಹಿತಿ ಪ್ರಕಾರ ಅಸ್ವಸ್ಥಗೊಂಡ ಇಬ್ಬರೂ ಹೊಟೇಲಿನಲ್ಲಿ ಉಪಾಹಾರ ಸೇವಿಸಿ ಆಗಮಿಸಿದ್ದಾರೆ ಎನ್ನಲಾಗಿದ್ದು, ತಟ್ಟೆಯಲ್ಲಿ ಕಂಡು ಬಂದ ಹಲ್ಲಿಯ ಬಗ್ಗೆ ಸಂಶಯ ವ್ಯಕ್ತವಾಗಿದೆ.

Also Read  ಬೈತಡ್ಕ: ಕಾರು ಅಪಘಾತ ಪ್ರಕರಣ ➤ ಎರಡೂ ಮೃತದೇಹಗಳು ಪತ್ತೆ - ಗೊಂದಲಗಳಿಗೆ ತೆರೆ

error: Content is protected !!
Scroll to Top