ಕಡಬ: ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ರವರ 178 ನೇ ಜನ್ಮ ದಿನಾಚರಣೆ.

(ನ್ಯೂಸ್ ಕಡಬ) newskadaba.com ಕಡಬ, .17. ಕರ್ನಾಟಕ ದಲಿತ ಸಂಘರ್ಷ ಸಮಿತಿ( ಬಿ ಕೃಷ್ಣಪ್ಪ ಸ್ಥಾಪಿತ 47-74/75). ತಾಲ್ಲೂಕು ಶಾಖೆ ಕಡಬ ಹಾಗೂ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಕಡಬದ ಅಂಬೇಡ್ಕರ್ ಭವನದಲ್ಲಿ “ಸಂವಿಧಾನ ಶಿಲ್ಪಿ ಪರಮಪೂಜ್ಯ ಡಾ||ಬಾಬಾಸಾಹೇಬ್ ಅಂಬೇಡ್ಕರ್ ರವರ 128ನೇ ಜನ್ಮ ದಿನಾಚರಣೆಯನ್ನುಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲ್ಲೂಕು ಸಂಚಾಲಕರಾದ ಉಮೇಶ್ ಕೋಡಿಂಬಾಳ ಇವರು ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರಬುದ್ಧ ಭಾರತ ಸಂಘದ ಅಣ್ಣು ಸಾಧನ್ ಅವರು ನೆರವೇರಿಸಿ ಮಾತನಾಡಿದವರು ಅಂಬೇಡ್ಕರ್ ಅವರ ಹೋರಾಟದ ಫಲದಿಂದಾಗಿ ಇವತ್ತು ಆಸ್ತಿ ಉದ್ಯೋಗ ಭೂಮಿ ಮುಂತಾದ ಸವಲತ್ತುಗಳನ್ನು ಪಡೆದಿದ್ದೇವೆ ಈ ಸವಲತ್ತುಗಳನ್ನು ಪಡೆದ ನಮ್ಮ ಸಮುದಾಯ ಅಂಬೇಡ್ಕರರನ್ನು ಮರೆತಿರುವುದು ದುಃಖದ ವಿಚಾರ ,ಈ ಎಲ್ಲಾ ಸವಲತ್ತು ಪಡೆಯಲು ಅಂಬೇಡ್ಕರ್ ಅವರೇ ಕಾರಣ ಎಂದರು. ಕರ್ನಾಟಕದಲ್ಲಿ ಪ್ರೊಫೆಸರ್  ಬಿ ಕೃಷ್ಣಪ್ಪ ಅವರ ಹೋರಾಟದ ಫಲದಿಂದ ಆರು ಲಕ್ಷ ಎಕರೆ ಭೂಮಿ ನಮ್ಮ ಸಮುದಾಯಕ್ಕೆ ಸಿಕ್ಕಿದೆ ಇದು ಕರ್ನಾಟಕದ ಇತಿಹಾಸದಲ್ಲಿ ಯಾವ ಮಂತ್ರಿಯಿಂದ ಸಾಧ್ಯವಾಗಿಲ್ಲ .ಅದರೆ ದಸಂಸಕ್ಕೆ ಇದು ಸಾದ್ಯವಾಗಿದೆ. ಅಂಬೇಡ್ಕರ್ ಅವರ ವಿಚಾರವನ್ನು ತಿಳಿಯದ ನಾವು ಬೇಡುವಾವರಗಿದ್ದೇವೆ ಅಂಬೇಡ್ಕರ್ ವಿಚಾರವನ್ನು ತಿಳಿದರೆ ಖಂಡಿತವಾಗಿಯೂ ನಾವು ನೀಡುವವರಗುತ್ತೆವೆ ಮತ್ತು ನಾವು ನೀಡುವವರಗಬೇಕು ಎಂದರು. ದಸಂಸ ಹಿರಿಯ ಮುಖಂಡ ಅನಂದ ಮಿತ್ತಬೈಲ್ ಮಾತನಾಡಿ ವಿಶ್ವದ ಬಲಿಷ್ಠ ರಾಷ್ಟ್ರವಾದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಅಂಬೇಡ್ಕರ್ ಅವರೇ ನನಗೆ ಸ್ಫೂರ್ತಿ ಎನ್ನುವಂತಹ ಮಾತುಗಳನ್ನಾಡುತ್ತಾರೆ ಆದರೆ ಭಾರತೀಯರಾದ ನಾವು ಅಂಬೇಡ್ಕರ್ ಅವರ ಜಾತಿಯನ್ನು ಹುಡುಕುತ್ತಿದ್ದೆವೇ ಇದು ದುರಂತ .

Also Read  ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಯಾನಂದ ರಾಮಚಂದ್ರ ನಾಯ್ಕ ವರ್ಗಾವಣೆ

ನಮ್ಮ ಸಮುದಾಯಕ್ಕೆ ಅನ್ಯಾಯವಾದಗ ಧ್ವನಿ ಎತ್ತದವರು ಸಮುದಾಯದ ನಾಯಕರಗಲು ಸಾದ್ಯವಿಲ್ಲ ,ವಿವಿಧ ಸಂಘಟನೆಗಳಲ್ಲಿರುವ ನಾವುಗಳು ಸಮುದಾಯಕ್ಕೆ ಸಂವಿಧಾನಕ್ಕೆ ಅಪಚಾರವಾದಗ ನಮ್ಮ ಸಂಘಟನೆಯನ್ನು ಬಿಟ್ಟು ಹೋರಾಟ ಮಾಡಬೇಕು .ಅಂತಹ ಹೋರಾಟ ಮಾಡುವವನೇ ನಿಜವಾದ ಅಂಬೇಡ್ಕರ್‍ವಾದಿಯಾಗಲು ಸಾದ್ಯ .ನಾವು ಪ್ರಾಣವನ್ನು ಬೇಕಾದ್ದರು ನೀಡುತ್ತೆವೆ ಅದರೆ ಸಿದ್ಧಾಂತ ಜೊತೆ ರಾಜಿ ಮಾಡುವುದಿಲ್ಲ ಅಂಬೇಡ್ಕರ್ ,ಕಾನ್ಶಿರಾಮ್ ,ಪ್ರೊಫೆಸರ್. ಬಿ ಕೃಷ್ಣಪ್ಪ ನವರು ಹೇಳಿದ ಮಾಗ9ದಲ್ಲಿಯೇ ಸಾಗುತ್ತೆವೆ ಎಂದರು. ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಇದರ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ ಮಾತನಾಡಿ ಯಾವ ಸಮುದಾಯಕ್ಕೆ ನಮ್ಮ ಶತ್ರುಗಳು ಯಾರು ಎಂದು ಗುರುತಿಸಲು ಸಾಧ್ಯವಾಗುವುದಿಲ್ಲವೋ ಅಂತಹ ಸಮುದಾಯ ಸಮಾಜದಲ್ಲಿ ಮೇಲೆ ಬರಲು ಸಾಧ್ಯವೇ ಇಲ್ಲ ಎಂದರು. ಮನುವಾದ ಎನ್ನುವುದು ಒಂದು ಸಿದ್ಧಾಂತ ಅದು ಕಾಂಗ್ರೆಸ್ ಬಿಜೆಪಿ ಕಮ್ಯುನಿಸ್ಟ್ ಎಲ್ಲಾ ಪಕ್ಷದಲ್ಲಿ ಇದೆ ಎಂಬುವುದನ್ನು ದಲಿತರು ಮುಸ್ಲಿಂ ಹಿಂದುಳಿದ ವರ್ಗದವರು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರು ಹಲವಾರು ಶೋಷಣೆಗಳನ್ನು ಅನುಭವಿಸಿ ನಾನು ಅನುಭವಿಸಿದ ಶೋಷಣೆ ನನ್ನ ಸಮುದಾಯಕ್ಕೆ ಸಿಗಬಾರದು ಎಂದು ಹಗಲಿರುಳು ಶ್ರಮಿಸಿದರು

ಅಂಬೇಡ್ಕರ್ ಅವರು ಹುಟ್ಟದೇ ಇರುತ್ತಿದ್ದರೆ ಅಂಬೇಡ್ಕರ್ ಅವರು ಸಂವಿಧಾನ ರಚಿಸದೆ ಇರುತ್ತಿದ್ದರೆ ನಾವು ಈ ಸಮಾಜದಲ್ಲಿ ಓಡಾಡಲು ಸಾಧ್ಯವಾಗುತ್ತಿರುವಾಗುತ್ತಿಲ್ಲ ಎಂದು ನುಡಿದರು . ದಲಿತರು ಮುಸಲ್ಮಾನರು ಹಿಂದುಳಿದವರು ಒಟ್ಟು ಸೇರಿದರೆ ಇಲ್ಲೊಂದು ಹೊಸ ಭೀಮ ಯುಗಕ್ಕೆ ನಾಂದಿ ಹಾಡಲು ಸಾಧ್ಯವಾಗುತ್ತದೆ ಈ ಕೆಲಸವನ್ನು ನಾವು ಮಾಡಬೇಕಾದ ಅನಿವಾರ್ಯತೆ ಇದೆ ಎಂದರು .
ದಸಂಸ ಪುತ್ತೂರು ತಾಲುಕು ಶಾಲೆಯ ಸಂಚಾಲಕ ಗಣೇಶ್ ಗುರಿಯಾನ ಮಾತನಾಡಿ ಕಂಬಳಪಳ್ಳಿಯಲ್ಲಿ ದಲಿತರ ಸಜೀವ ದಹನ ನಡೆದ ಸಂದರ್ಭದಲ್ಲಿ ದಲಿತ ಗೃಹಮಂತ್ರಿ ಇದ್ದರು ಆ ಪ್ರಕರಣ ಕೋರ್ಟಿನಲ್ಲಿ ಬಿದ್ದು ಹೋಗುವಾಗ ಸಹ ದಲಿತ ಗೃಹಮಂತ್ರಿ ಇದ್ದರು ದಲಿತರನ್ನು ಸಜೀವ ದಹನ ಮಾಡಿದ ಸಂದರ್ಭದಲ್ಲಿ ನಮ್ಮ ಕೈಯಲ್ಲಿ ಅಧಿಕಾರ ಇದ್ದರೂ ನಮಗೆ ನ್ಯಾಯವನ್ನು ದೊರಕಿಸಿಕೊಡಲು ಅವರಿಂದ ಸಾಧ್ಯವಾಗಿಲ್ಲ ಅದಕ್ಕಾಗಿ ನಾವು ಸ್ವಾತಂತ್ರ್ಯ ರಾಜಕೀಯ ಅಧಿಕಾರವನ್ನು ಪಡೆದು ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಸೃಷ್ಟಿಸುವುದು ಅನಿವಾರ್ಯತೆ ಇದೆ ಇಲ್ಲಿರುವಂತಹ ವಿವಿಧ ದಲಿತ ಸಂಘಟನೆಯ ಮುಖಂಡರುಗಳು, ಕಾರ್ಯಕರ್ತರು ಒಟ್ಟು ಸೇರಿದ್ದಲ್ಲಿ ನಮ್ಮ ಜಿಲ್ಲೆಯಲ್ಲಿ ಹೊಸ ಪರ್ಯಾಯ ಶಕ್ತಿಯನ್ನು ಸೃಷ್ಟಿ ಮಾಡಿ ಹೊಸ ಭೀಮಾ ಯುಗಕ್ಕೆ ನಾಂದಿಯಾಡಲು ಸಾದ್ಯವಿದೆ ಎದ್ದರು.

Also Read  ತರಕಾರಿ ವಾಹನದಲ್ಲಿ ಅಕ್ರಮ ಗೋಸಾಗಾಟ

ದಲಿತ ಸೇವಾ ಸಮಿತಿಯ ಜಿಲ್ಲಾ ಮುಖಂಡ ಅಣ್ಣು ಎಳ್ತ್ ಮಾರ್, ಅಂಬೇಡ್ಕರ್‍ವಾದ ಸಂಘಟನೆಯ ಜಿಲ್ಲಾ ಮುಖಂಡ ಗುರುವಪ್ಪ ಕಲ್ಲಗುಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು .ವೇದಿಕೆಯಲ್ಲಿ ದಿಂ.ಎಂ .ಕೂಸಪ್ಪರವರ ಧರ್ಮ ಪತ್ನಿ ಸುಶೀಲಾ ಕುರಿಯ ಉಪಸ್ಥಿತರಿದ್ದರು . ದಸಂಸ ಪ್ರೊಫೆಸರ್  ಬಿ ಕೃಷ್ಣಪ್ಪ ಸ್ಥಾಪಿತ ಕಡಬ ಹಾಗೂ ಪುತ್ತೂರು ತಾಲ್ಲೂಕು ಸಮಿತಿಯ ಮುಖಂಡರಾದ ಬಾಬು ಸವಣೂರು. ವಿಶ್ವನಾಥ್ ಪುಣ್ಚತ್ತಾರ್. ನಾಗೇಶ್ ಕುರಿಯಾ .ಹರ್ಷಿತ್ ಕುರಿಯಾ .ರವಿ ಮರ್ದಾಳ ಪುಟ್ಟಣ್ಣ ತೋಟಂತಿಲ್ಲ. ಮೀನಾಕ್ಷಿ ಬಂಬಿಲ. ಚೆನ್ನು ಮಂತೂರು.ಚಂದ್ರವಾತಿ ಅರ್ಲಪದವು.ಸೀತಾರಾಮ್ ಅರ್ಲಪದವು. ಅಣ್ಣು ಪೇರುಮಜಲು. ಪ್ರಮೀಣ್ ಪಾಪೆಮಜಲ್ ಹಾಗೂ ವಿವಿಧ ಗ್ರಾಮ ಸಮಿತಿ ಪದಾಧಿಕಾರಿಗಳು ,ವಿವಿಧ ದಸಂಸ ದ ಮುಖಂಡರುಗಳು ಭಾಗವಹಿಸಿದ್ದರು . ಹರೀಶ್ ಅಂಕಜಾಲ್ ಕಾರ್ಯಕ್ರಮನ್ನು ಸ್ವಾಗತಿಸಿ, ನಿರೂಪಿಸಿ , ಧನ್ಯವಾದ ವಿತ್ತರು.

Also Read  ಚನ್ನಪಟ್ಟಣ ಉಪಚುನಾವಣೆ: ಸಿಪಿ ಯೋಗೇಶ್ವರ್ಗೆ ಭರ್ಜರಿ ಗೆಲುವು

error: Content is protected !!
Scroll to Top