ಕಡಬದ ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಮತ ಯಾಚನೆಯ ವೀಡಿಯೋ ವೈರಲ್ ➤ ಬಿಜೆಪಿ ಪಕ್ಷದ ಮುಖಂಡರಿಂದ ಸಾರ್ವಜನಿಕ ಕ್ಷಮೆ ಯಾಚನೆ

(ನ್ಯೂಸ್ ಕಡಬ) newskadaba.com ಕಡಬ, ಎ.10. ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಕಡಬದ ಕೊರುಂದೂರು ಪರಿಸರದ ಕೆಲವು ಮುಸ್ಲಿಂ ಸಮುದಾಯದ ಮನೆಗಳಲ್ಲಿ ಮತ ಯಾಚಿಸುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದರಿಂದ ಅದೀಗ ವೈರಲ್ ಆಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕಡಬದ ಬಿಜೆಪಿ ಧುರೀಣ ಸತೀಶ್ ನಾಯಕ್, ಆದಂ ಕುಂಡೋಳಿ, ಪುತ್ತು ಮೇಸ್ತ್ರಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದು, ಕಡಬದ ಕೊರುಂದೂರು ಪರಿಸರದ ಮುಸ್ಲಿಂ ಸಮುದಾಯದ ಮನೆಗಳಿಗೆ ನಾವು ತೆರಳಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚಾರ ಪಡಿಸಿ ಮತ ಯಾಚಿಸುತ್ತಿದ್ದಾಗ ನಮ್ಮದೇ ಕಾರ್ಯಕರ್ತರು ವೀಡಿಯೋ ಮಾಡಿರುವ ಬಗ್ಗೆ ವಿಷಾದವಿದೆ. ಯಾವುದೇ ದುರುದ್ದೇಶದಿಂದ ಈ ವೀಡಿಯೋವನ್ನು ಹಾಕಿಲ್ಲವೆಂದು ಈ ಮೂಲಕ ತಿಳಿಯಪಡಿಸುತ್ತಾ, ಇದರಿಂದಾಗಿ ಮುಸ್ಲಿಂ ಸಮುದಾಯಕ್ಕೆ ಬೇಸರ ಆಗಿದ್ದಲ್ಲಿ ಪಕ್ಷದ ಪರವಾಗಿ ಕ್ಷಮೆ ಯಾಚಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಂಗಳೂರು: ಖಾಸಗಿ ಶಾಲಾ ಶಿಕ್ಷಕಿ ಆತ್ಮಹತ್ಯೆಗೆ ಶರಣು

error: Content is protected !!
Scroll to Top