ಬಂಟ್ವಾಳ: ಕಾರು – ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಸಹೋದರಿಯರಿಬ್ಬರು ಮೃತ್ಯು, ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.8. ಕಾರು ಮತ್ತು ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿಯಾಗಿ ರಿಕ್ಷಾದಲ್ಲಿದ್ದ ಸಹೋದರಿಯರಿಬ್ಬರು ಮೃತಪಟ್ಟ ದಾರುಣ ಘಟನೆ ಸೋಮವಾರದಂದು ಬಂಟ್ವಾಳ ಸಮೀಪದ ಸಜೀಪ ಎಂಬಲ್ಲಿ ಸಂಭವಿಸಿದೆ.

ಮೃತ ಮಹಿಳೆಯರನ್ನು ಮಂಚಿ ನಿವಾಸಿಗಳಾದ ಝೊಹರಾ(55) ಹಾಗೂ ಝೈನಬಾ(45) ಎಂದು ಗುರುತಿಸಲಾಗಿದೆ. ಝೊಹರಾರಿಗೆ ಅಸೌಖ್ಯವಿದ್ದ ಹಿನ್ನೆಲೆಯಲ್ಲಿ ಸಹೋದರಿ ಝೈನಬಾರವರ ಜೊತೆ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಸಜೀಪ ಸಮೀಪದ ಕಂಚಿಲ ಎಂಬಲ್ಲಿ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರೊಂದು ಅತೀ ವೇಗವಾಗಿ ಬಂದು ಇವರಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿಕ್ಷಾ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡ ಸಹೋದರಿಯರನ್ನು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ. ಚಾಲಕರಿಬ್ಬರೂ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಹೊಸಮಠ: ಅಕ್ರಮ ಮರಳು ದಂಧೆ ➤ ವಾಹನ ಸಹಿತ ಇಬ್ಬರು ವಶಕ್ಕೆ

error: Content is protected !!
Scroll to Top