ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕ್ ಗೆ ಬಿದ್ದ ಮಕ್ಕಳು ➤ ಸಹೋದರಿಯರಿಬ್ಬರ ಸೇರಿದಂತೆ ಮೂವರು ಮಕ್ಕಳ ದುರ್ಮರಣ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.03. ಆಟವಾಡಲೆಂದು ತೆರಳಿದ್ದ ಮೂವರು ಮಕ್ಕಳು ನೀರಿನ‌ ಟ್ಯಾಂಕಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಮೃತ ಮಕ್ಕಳನ್ನು ಬೆಟ್ಟಂಪಾಡಿಯ ಮಿತ್ತಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಾದ ಉಡ್ಡಂಗಳ ನಿವಾಸಿ ರಮೇಶ್ ಎಂಬವರ ಪುತ್ರಿಯರಾದ ವಿಶ್ಮಿತಾ(13), ಚೈತ್ರಾ (10) ಹಾಗೂ ರವಿ ಎಂಬವರ ಪುತ್ರ ಜಿತೇಶ್(13) ಎಂದು ಗುರುತಿಸಲಾಗಿದೆ. ಇವರು ನೀರಿನಲ್ಲಿ ಆಟವಾಡಲೆಂದು ಟಾಂಕಿಗೆ ಇಳಿದಿರಬಹುದೆಂದು ಶಂಕಿಸಲಾಗಿದ್ದು, ಟ್ಯಾಂಕ್ ನಿರ್ಮಾಣವಾಗಿ ಮೂರು ತಿಂಗಳಾಗಿದ್ದರೂ ಟ್ಯಾಂಕ್ ನ ಮುಚ್ಚಳಕ್ಕೆ ಬೀಗ ಹಾಕದಿರುವ ಪಂಚಾಯತ್‌ನ ನಿರ್ಲಕ್ಷತನದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ಪಡಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಕೊರೋನಾ ಇಳಿಕೆ ➤ ಇಂದು 79 ಮಂದಿಗೆ ಕೊರೋನಾ ಪಾಸಿಟಿವ್

error: Content is protected !!
Scroll to Top