ಗೋಳಿತೊಟ್ಟು: ಲಾರಿ ಚಾಲಕನ ಕೈಕಾಲು ಕಟ್ಟಿ ಹಾಕಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರು ➤ ಉಪ್ಪಿನಂಗಡಿ ಪೊಲೀಸರಲ್ಲಿ ಸತ್ಯ ಬಾಯ್ಬಿಟ್ಟ ಆರೋಪಿ ಲಾರಿ ಮಾಲೀಕ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.03. ಕಳೆದ ಮಾರ್ಚ್ 25 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿ ಲಾರಿ ಚಾಲಕನ ಬಾಯಿಗೆ ಬಟ್ಟೆ ತುರುಕಿ ಕೈಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸ್ ತನಿಖಾ ತಂಡ ಮಹತ್ವದ ಯಶಸ್ಸು ಸಾಧಿಸಿದ್ದು, ದರೋಡೆ ಪ್ರಕರಣದ ಸತ್ಯಾಂಶ ಬಯಲುಗೊಳಿಸಿದೆ.

ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಸ್ವತಃ ಲಾರಿ ಮಾಲಕ ಹಾಗೂ ಚಾಲಕನಾಗಿದ್ದ ಮಂಡ್ಯ ಪಾಂಡವಪುರದ ನಿವಾಸಿ ಅಂಬರೀಶ್ ಸ್ವತಃ ತಾನೇ ಮಾಡಿದ ದರೋಡೆ ನಾಟಕ ಎನ್ನುವುದು ಪತ್ತೆಯಾಗಿದೆ. ಒಂದು ಲಕ್ಷಕ್ಕೂ ಮಿಕ್ಕಿದ ಸೊತ್ತುಗಳನ್ನು ತಾನೇ ಕದ್ದು ಬಳಿಕ ತಾನೇ ತನ್ನ ಕೈ ಕಾಲುಗಳನ್ನು ಕಟ್ಟಿ ಹಾಕಿದಂತೆ ಮಾಡಿ ದರೋಡೆಕೋರರ ಕೃತ್ಯವೆಂದು ಬಿಂಬಿಸಿದ ಲಾರಿ ಮಾಲಕ ಅಂಬರೀಶನನ್ನು ಉಪ್ಪಿನಂಗಡಿ ಪೊಲೀಸ್ ತಂಡ ಬಂಧಿಸಿದೆ.

ಕಾರ್ಯಾಚರಣೆಯಲ್ಲಿ ಪ್ರೊಬೆಷನರಿ ಎಎಸ್ಪಿ ಪ್ರದೀಪ್ ಗುಂಟಿ, ವೃತ್ತ ನಿರೀಕ್ಷಕ ಮಂಜುನಾಥ್, ಉಪ ನಿರೀಕ್ಷಕ ನಂದಕುಮಾರ್, ಪ್ರೊಬೆಷನರಿ ಎಸ್ಐ ಪವನ್ ನಾಯಕ್, ಎಎಸ್ಐ ರುಕ್ಮಯ ಸಿಬ್ಬಂದಿಗಳಾದ ಹರೀಶ್ಚಂದ್ರ, ಇರ್ಷಾದ್, ಜಗದೀಶ್ ಪಾಲ್ಗೊಂಡಿದ್ದರು.

error: Content is protected !!

Join the Group

Join WhatsApp Group