ಮಳೆಗೆ ನೆಲಕ್ಕುರುಳಿದ ಆತೂರು ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೆಂಡಾಲ್ ➤ ಚೆಲ್ಲಾಪಿಲ್ಲಿಯಾದ ಸಂತೆ ಮಳಿಗೆಗಳು

(ನ್ಯೂಸ್ ಕಡಬ) newskadaba.com ಕಡಬ, ಎ.03. ಮಂಗಳವಾರ ಸಂಜೆ ವೇಳೆಗೆ ಕರಾವಳಿಯ ಅಲ್ಲಲ್ಲಿ ಸುರಿದ ಭಾರೀ ಗಾಳಿ ಮಳೆಗೆ ವಿವಿಧೆಡೆ ಕೃಷಿ ಸೇರಿದಂತೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.

ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಳದ ಜಾತ್ರೋತ್ಸವದ ಶಾಮಿಯಾನವು ಧರಾಶಾಯಿಯಾಗಿದ್ದು, ಈ ವೇಳೆ ಅಲ್ಲಿದ್ದವರು ದೇವಸ್ಥಾನದ ಒಳಗಡೆಗೆ ತೆರಳಿದ್ದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ವೇಳೆ ಬೀಸಿದ ಭಾರೀ ಗಾಳಿಗೆ ಜಾತ್ರೋತ್ಸವದಲ್ಲಿನ ಸಂತೆ ಮಳಿಗೆಗಳು ಚೆಲ್ಲಾಪಿಲ್ಲಿಯಾಗಿದ್ದು, ಅದನ್ನು ಸಂರಕ್ಷಿಸಲು ವ್ಯಾಪಾರಿಗಳು ಹರಸಾಹಸಪಟ್ಟರು.

Also Read  ತುಳುನಾಡಿನ ಚರಿತ್ರೆಗೆ ದೊರೆತ ಮಹತ್ವದ ಮನ್ನಣೆ ➤ ಪಠ್ಯಪುಸ್ತಕವಾಗಲಿದೆ ತುಳುನಾಡಿನ ಚರಿತ್ರೆ

error: Content is protected !!
Scroll to Top