ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಎ.02. ಇಲ್ಲಿನ ತಿಮರಡ್ಡ ನಿವಾಸಿ ಹಸೈನಾರ್ ಎಂಬವರ ಪುತ್ರ ಅನ್ಸಾರ್ ಎಂಬವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆಂದು ಕಡಬ ಠಾಣೆಗೆ ದೂರು ನೀಡಲಾಗಿದೆ.

ಅನ್ಸಾರ್ ಅವರು ಮಾ.21ರಂದು ಸುಳ್ಯದ ಉಬರಡ್ಕಕ್ಕೆ ಮರದ ಕೆಲಸಕ್ಕೆ ಹೋದವರು ಸಂಜೆ ವೇಳೆ ಕಡಬಕ್ಕೆ ಬಂದಿದ್ದರು. ಆದರೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಹಸೈನಾರ್ ಅವರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top