ಕುಂತೂರು: ಸೈಂಟ್ ಮೇರೀಸ್ ಚರ್ಚಿನ ಧರ್ಮಗುರು ವರ್ಗಾವಣೆ ➤ ನೂತನ ಧರ್ಮಗುರುಗಳಾಗಿ ಕಡಬದ ಫಾ| ಪಿ.ಕೆ.ಅಬ್ರಹಾಂ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಎ.02. ಇಲ್ಲಿನ ಕುಂತೂರು ಸೈಂಟ್ ಮೇರಿಸ್ ಜಾಕೊಬೈಟ್ ಸಿರಿಯನ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ| ಫಾ| ಪಿ.ಕೆ. ಅಬ್ರಾಹಂ ಸೋಮವಾರದಂದು ಅಧಿಕಾರ ವಹಿಸಿಕೊಂಡರು.

ಪ್ರಸ್ತುತ ಕಡಬ ನಿವಾಸಿಯಾಗಿರುವ ಇವರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚೀಮೇನಿ ಚರ್ಚ್‌ನಿಂದ ಕುಂತೂರಿಗೆ ವರ್ಗಾವಣೆಗೊಂಡಿದ್ದು, ಇವರು ಈ ಮೊದಲು ಜೆಪ್ಪು, ನೆಲ್ಯಾಡಿ, ಶಿರಾಡಿ, ಶಿಬಾಜೆ, ಅಡ್ಡಹೊಳೆ, ಬೆಳುವಾಯಿ, ಇಚ್ಲಂಪಾಡಿ, ರೆಂಜಿಲಾಡಿ, ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಧರ್ಮಗುರುಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಸ್ಥಳೀಯವಾಗಿ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

Also Read  ಪುತ್ತೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಆಭರಣ ಕಳವು

error: Content is protected !!
Scroll to Top