ಅಡ್ಯಾರ್: ಕೋಳಿ ಸಾಗಾಟದ ವಾಹನ ಬೈಕಿಗೆ ಢಿಕ್ಕಿ ➤ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಬಲಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.26. ಕೋಳಿ ಸಾಗಾಟದ ಟೆಂಪೊವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಅಡ್ಯಾರ್ ಕಣ್ಣೂರು ಸಮೀಪದ ವಳಚ್ಚಿಲ್ ಎಂಬಲ್ಲಿ ಮಂಗಳವಾರದಂದು ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿ ಬಾಗಲಕೋಟೆ ಮೂಲದ ತಿಪ್ಪಣ್ಣ (20) ಎಂದು ಗುರುತಿಸಲಾಗಿದೆ. ಫಾರಂ ಕೋಳಿಗಳನ್ನು ಸಾಗಿಸುತ್ತಿದ್ದ ಟೆಂಪೋ ತಿಪ್ಪಣ್ಣ ಸಂಚರಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Also Read  ಮಂಗಳೂರು: ಕನ್ನಡ ರಾಜ್ಯೋತ್ಸವ 2022 ಆಚರಣೆ ➤ ಎಲ್ಲೆಡೆ ಕನ್ನಡ ಬೆಳಗಲಿ, ಮೊಳಗಲಿ- ಡಾ|| ಚೂಂತಾರು

error: Content is protected !!
Scroll to Top