ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.02. ರಾಜ್ಯ ಇಂಧನ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ನಿವಾಸ, ಕಾಂಗ್ರೆಸ್ ನಾಯಕರು ಹಾಗೂ ಗುಜರಾತ್ ನ ಶಾಸಕರು ತಂಗಿರುವ ರೆಸಾರ್ಟ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿ.ಕೆ ಶಿವಕುಮಾರ್ ಅವರ ‘ಕೆಂಕೇರಿ’ ನಿವಾಸ ಮತ್ತು ಕಚೇರಿ, ಅವರ ಆಪ್ತ ವಿಧಾನಪರಿಷತ್ ಸದಸ್ಯ ಕನಕಪುರದ ಎಸ್. ರವಿ ನಿವಾಸ, ಶಿವಕುಮಾರ್ ಸಹೋದರ ಸಂಸದ ಡಿ.ಕೆ. ಸುರೇಶ್ ಮನೆ, ಸೇರಿದಂತೆ ಸುಮಾರು 10 ಕಡೆಗಳಲ್ಲಿ 20 ಐಟಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ. ಇದೇ ವೇಳೆ ಗುಜರಾತ್ ನ ಕಾಂಗ್ರೆಸ್ ಶಾಸಕರು ಕಳೆದ ಕೆಲವು ದಿನಗಳಿಂದ ವಾಸ್ತವ್ಯ ಹೂಡಿರುವ ರಾಮನಗರ ಜಿಲ್ಲೆ ಬಿಡದಿ ತಾಲೂಕಿನಲ್ಲಿರುವ ಈಗಲ್ ಟನ್ ರೆಸಾರ್ಟ್ ಮೇಲೂ ಐಟಿ ದಾಳಿ ನಡೆದಿದೆ.

Also Read  ನಮಗೂ ಕಾಲ ಬಂದೇ ಬರುತ್ತದೆ: ಡಿ.ಕೆ.ಶಿವಕುಮಾರ್ ► ತನ್ನ, ಆಪ್ತರ ನಿವಾಸಕ್ಕೆ ನಡೆದ ಐಟಿ ದಾಳಿಗೆ ಉತ್ತರ

ಡಿ.ಕೆ. ಶಿವಕುಮಾರ್ ಬುಕ್ ಮಾಡಿರುವ ರೆಸಾರ್ಟ್ ನ ರೂಂ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು, ಶಾಸಕರ ಕೊಠಡಿಗಳನ್ನು ಪರಿಶೀಲಿಸುತ್ತಿದ್ದಾರೆ. ರೆಸಾರ್ಟ್ ನಿಂದ ಹೊರ ಹೋಗುವ ಮತ್ತು ಒಳಬರುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

error: Content is protected !!
Scroll to Top