ಇಲ್ಲೊಬ್ಬರು ಮನೆ ನಿರ್ಮಿಸಿ ಮೋದಿ ಹೆಸರಿಟ್ಟರು ► ಉದ್ಘಾಟನೆಗಾಗಿ ಆಹ್ವಾನ ಪತ್ರಿಕೆ ಕಳುಹಿಸಿದರು

(ನ್ಯೂಸ್ ಕಡಬ) newskadaba.com
ಚನ್ನಪಟ್ಟಣ, ಆ.02. ಮನೆ ಕಟ್ಟಿದಾಕ್ಷಣ ದೇವರ ಹೆಸರು, ಮಕ್ಕಳ ಹೆಸರು, ಸಾಂಸ್ಕೃತಿಕ ಹೆಸರು ಮೊದಲಾದ ತಮ್ಮ ಅಭಿರುಚಿಗೆ ತಕ್ಕಂತೆ ಹೆಸರು ಇಡುವುದು ಸಹಜ. ಆದರೆ ಇಲ್ಲೊಬ್ಬರು ತಾವು ಕಟ್ಟಿಸಿದ ಮನೆಗೆ ಭಾರತದ ಪ್ರಧಾನ ಮಂತ್ರಿಯ ಹೆಸರನ್ನು ಇಟ್ಟು ಅಚ್ಚರಿ ಮೂಡಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಯಲಿಯೂರು ಗ್ರಾಮದ ನಿವಾಸಿ ಮಾದಯ್ಯ ಶೆಟ್ಟಿಯವರು ಹೊಸದಾಗಿ ನಿರ್ಮಿಸಿರುವ ತಮ್ಮ ಮನೆಗೆ ‘ಶ್ರೀ ಮೋದಿ ನಿಲಯ’ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಅಲ್ಲದೇ ಆಗಸ್ಟ್ 06 ರಂದು ನಡೆಯಲಿರುವ ತಮ್ಮ ಕನಸಿನ ಮನೆಯ ಗೃಹ ಪ್ರವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಆಹ್ವಾನ ನೀಡಿದ್ದಾರೆ. ಪ್ರಧಾನ ಮಂತ್ರಿ ಕಚೇರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆಯನ್ನು ಕಳುಹಿಸಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು.

Also Read 

ನರೇಂದ್ರ ಮೋದಿ ಪ್ರಧಾನಿಯಾಗಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳೇ ನಮ್ಮ ಮನೆಗೆ ಅವರ ಹೆಸರಿಡಲು ಕಾರಣ. ಗ್ರಾಮೀಣ ಭಾಗದ ಪ್ರತಿಯೊಬ್ಬರೂ ಸೂರು ಕಟ್ಟಿಕೊಳ್ಳಬೇಕೆಂದು ವಸತಿ ಯೋಜನೆಯನ್ನು ಜಾರಿಗೆ ತಂದಿರುವುದು, ಕಾಳಧನವನ್ನು ನಿಯಂತ್ರಿಸುವ ಮೂಲಕ ಬಡವರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡಿರುವುದರಿಂದ ನಮ್ಮ ಮನೆಮಂದಿಯೆಲ್ಲ ಮೋದಿ ಅವರ ಬಗ್ಗೆ ಅಭಿಮಾನ ಹೊಂದಿದ್ದೇವೆ. ಅದಕ್ಕಾಗಿ ನಮ್ಮ ಮನೆಗೆ ಅವರ ಹೆಸರನ್ನೇ ಇಟ್ಟಿದ್ದೇವೆ ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

error: Content is protected !!
Scroll to Top