ಕಾರಿನ ಗಾಜುಗಳಿಗೆ ಹಾಕುವ ಟಿಂಟ್ ವಿರುದ್ಧ ಮುಂದುವರಿದ ಪೊಲೀಸರ ಕಾರ್ಯಾಚರಣೆ ➤ ಮಂಗಳೂರಿನಲ್ಲಿ 2500 ಕ್ಕೂ ಹೆಚ್ಚು ವಾಹನಗಳ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.10. ವಾಹನಗಳ ಟಿಂಟ್ ಫಿಲಂ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮಂಗಳೂರು ನಗರ ಪೊಲೀಸರು ಕಳೆದೆರಡು ತಿಂಗಳಿನಲ್ಲಿ 2500ಕ್ಕೂ ಹೆಚ್ಚು ಕೇಸುಗಳನ್ನು ದಾಖಲಿಸಿ, ದಂಡ ವಸೂಲಿ ಮಾಡಿದ್ದಾರೆ.

ಈ ಬಗ್ಗೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು. ಮಂಗಳೂರು ಮಹಾನಗರದಲ್ಲಿ ವಾಹನಗಳ ಗಾಜಿಗೆ ಕಪ್ಪು ಟಿಂಟ್ ಅಳವಡಿಕೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು 2500 ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.

Also Read  ಕುಟ್ರುಪ್ಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ವರ್ಗಾವಣೆ ➤ ಪ್ರಭಾರ ಪಿಡಿಒ ಆಗಿ ರಾಮಕುಂಜದ ಜೆರಾಲ್ಡ್ ಮಸ್ಕರೇನಸ್ ನೇಮಕ

error: Content is protected !!
Scroll to Top