ಕಡಬ: ಕಾಲೇಜಿಗೆಂದು ತೆರಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.07. ಬುಧವಾರ ಬೆಳಿಗ್ಗೆ ಕಾಲೇಜಿಗೆಂದು ಮನೆಯಿಂದ ತೆರಳಿದ ಯುವಕನೋರ್ವ ಮನೆಗೆ ತೆರಳದೆ ನಾಪತ್ತೆಯಾಗಿರುವ ಘಟನೆ ಕಡಬದಿಂದ ವರದಿಯಾಗಿದೆ.

ನಾಪತ್ತೆಯಾಗಿರುವ ಯುವಕನನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ಜಾಣಮನೆ ನಿವಾಸಿ ದೇವಣ್ಣ ಕುಂಬಾರ ಎಂಬವರ ಪುತ್ರ ಧನಂಜಯ(19) ಎಂದು ಗುರುತಿಸಲಾಗಿದೆ. ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಬುಧವಾರದಂದು ಕಾಲೇಜಿನಿಂದ ಕಡಬಕ್ಕೆ ಹಿಂತಿರುಗಿದ್ದು, ಆ ಬಳಿಕ ಮನೆಗೆ ತೆರಳದೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಸಂಬಂಧಿಕರಲ್ಲೆಲ್ಲಾ ಹುಡುಕಾಡಿ ಪತ್ತೆಯಾಗದ ಹಿನ್ನೆಲೆಯಲ್ಲಿ ಗುರುವಾರದಂದು ಆತನ ತಂದೆ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಬಗ್ಗೆ ಮಾಹಿಯಿದ್ದಲ್ಲಿ ಕಡಬ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಉಪ್ಪಿನಂಗಡಿ: ದಂಪತಿ ಆತ್ಮಹತ್ಯೆ

error: Content is protected !!
Scroll to Top