ಇಂದು ನೆಕ್ಕಿತ್ತಡ್ಕ ಮಖಾಂ ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಂಗಮ

(ನ್ಯೂಸ್ ಕಡಬ) newskadaba.com ಕಡಬ, ಮಾ.07. ತಕ್ವಿಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿ ಮರ್ಧಾಳ ಇದರ ಅಧೀನದಲ್ಲಿರುವ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಕ್ಕಿತ್ತಡ್ಕ ಎಂಬಲ್ಲಿ ಜಾತಿ, ಧರ್ಮ ಭೇದವೆನ್ನದೆ ಹಲವಾರು ಸಮಸ್ಯೆಗಳಿಗೆ ಹರಕೆಯ ಮೂಲಕ ಪರಿಹಾರ ಕಂಡಿರುವ ನೆಕ್ಕಿತ್ತಡ್ಕ‌ ಮಖಾಂ ಉರೂಸ್ ಹಾಗೂ ಸೌಹಾರ್ದ ಸಂಗಮ ಇಂದು ಸಂಜೆ‌ ನಡೆಯಲಿದೆ.

ಸಂಜೆ ಗಂಟೆ 7 ರಿಂದ ಆರಂಭವಾಗುವ ಸೌಹಾರ್ದ ಸಂಗಮದಲ್ಲಿ ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಬೆಥನಿ ಪಿ.ಯು.ಕಾಲೇಜಿನ ನಿರ್ದೇಶಕರಾದ ರೆ| ಫಾ| ಸಕರಿಯಾಸ್ ನಂದಿಯಾಟ್ಟ್ ಒಐಸಿ, ಹಾವೇರಿ ಮುಈನು-ಸುನ್ನ ಪ್ರಾಂಶುಪಾಲರಾದ ಬಹು| ಮುಸ್ತಫಾ ನಯೀಮಿ, ಹಿಮಮಿ, ಸಖಾಫಿ ಎಂ.ಎ. ಸೌಹಾರ್ದತೆಯ ಸಂದೇಶ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ, ಧಾರ್ಮಿಕ ಮುಂದಾಳುಗಳು ಭಾಗವಹಿಸಲಿದ್ದಾರೆ. ರಾತ್ರಿ 8:30 ಕ್ಕೆ ಸರಿಯಾಗಿ ಅಸ್ಸಯ್ಯದ್ ಜಮಾಲುಲ್ಲೈಲಿ ತಂಙಲ್ ಕಾಜೂರು ಇವರ ಅಧ್ಯಕ್ಷತೆ ಮತ್ತು ದುವಾಶೀರ್ವಚನದೊಂದಿಗೆ ಉರೂಸ್ ಕಾರ್ಯಕ್ರಮ ಪ್ರಾರಂಭಗೊಂಡು ಬಹು ಅಬ್ದುಲ್ ಲತೀಫ್ ಸ’ಅದಿ ಪಯಶ್ವಿ ಯವರು ಆದರ್ಶಂ ನೆಂಜೋಡು ಚೇರ್ತ್ ವೆಕ್ಕಾನುಳ್ಳದ ಎಂಬ ವಿಷಯದ ಕುರಿತಾಗಿ ಪ್ರೌಢ ಗಂಭೀರವಾಗಿ ಮಾತನಾಡಲಿದ್ದಾರೆ ಎಂದು ಉರೂಸ್ ಕಮಿಟಿಯ ಪ್ರಕಟಣೆ ತಿಳಿಸಿದೆ.

Also Read  ಪ್ರಜ್ವಲ್ ರೇವಣ್ಣ ಕೇಸ್; 'ಅಶ್ಲೀಲ ವಿಡಿಯೋಗಳು ಅಸಲಿ' ಎಫ್ಎಸ್ಎಲ್ ವರದಿ

error: Content is protected !!
Scroll to Top