ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ ವಿ 15 ಪ್ರೊ ಆಂಡ್ರಾಯ್ಡ್ ಮೊಬೈಲ್ ► ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕಡಬದ ದುರ್ಗಾಂಬಾ ಮೊಬೈಲ್ಸ್ ನಲ್ಲಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಮಾ.07. ಹೊಸದಾಗಿ ಮಾರುಕಟ್ಟೆಗೆ ಆಗಮಿಸಿದ ವಿವೊ ಕಂಪೆನಿಯ ವಿ15 ಪ್ರೊ ಮಾಡೆಲನ್ನು ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕಡಬದ ಶ್ರೀ ದುರ್ಗಾಂಬ ಮೊಬೈಲ್ ಸ್ಟೋರ್‌ನಲ್ಲಿ ಬಿಡುಗಡೆಗೊಳಿಸಲಾಯಿತು.

ಸ್ಮಾರ್ಟ್ ಪೋನ್‌ಗಳಲ್ಲಿ ಅತ್ಯಾಧುನಿಕ ವೈಶಿಷ್ಠವನ್ನೊಳಗೊಂಡಿರುವ ವಿವೋ ಕಂಪೆನಿಯ ವಿ15 ಪ್ರೊ ಹ್ಯಾಂಡ್‌ಸೆಟ್ ಮಾರುಕಟ್ಟೆಗೆ ಆಗಮಿಸಿದ್ದು, ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಕಡಬದ ಪ್ರತಿಷ್ಠಿತ ಶ್ರೀ ದುರ್ಗಾಂಬ ಮೊಬೈಲ್ ಸ್ಟೋರ್‌ನಲ್ಲಿ ಗ್ರಾಹಕರಿಗೆ ಮಿತದರದಲ್ಲಿ ದೊರೆಯುವಂತಾಗಿದೆ. ಇನ್‌ಡಿಸ್‌ಪ್ಲೇ ಪಿಂಗರ್ ಪ್ರಿಂಟ್ ಹೊಂದಿರುವ ಈ ಮೊಬೈಲ್ 6.39 ಸೂಪರ್ ಎಮೊಎಲ್‌ಇಡಿ ಅಲ್ಟ್ರಾ ಫುಲ್ ವಿವೋ ಟಿಎಮ್ ಹೊಂದಿದ್ದು 32ಎಮ್‌ಪಿ ಪೊಪ್ ಆಪ್ ಸೆಲ್ಫಿ ಕ್ಯಾಮರಾ ಹಾಗೂ ಹಿಂಬದಿ ಟ್ರಿಪಲ್ ಅಲ್ಲದೆ ಅತ್ಯಾಧುನಿಕ ನೈಟ್ ಮೋಡ್ (ಮೋಡ್)ಫೊಟೋಗ್ರಾಫಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಶ್ರೀ ದುರ್ಗಾಂಬ ಮೊಬೈಲ್ ಸ್ಟೋರ್ ಮಾಲಕ ದಯಾನಂದ ಆರಿಗರವರು ತಿಳಿಸಿದ್ದಾರೆ.

Also Read  ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆ: ಅಧಿಕೃತ ಅನುಮೋದನೆಯೊಂದೆ ಬಾಕಿ

 

ನೂಜಿಬಾಳ್ತಿಲ ಗ್ರಾಮದ ಅಕ್ಷಯ್ ಕುಮಾರ್ ಕೂರಟರವರು ಮೊದಲ ಗ್ರಾಹಕರಾಗಿ ಮೊಬೈಲ್ ಪಡೆದುಕೊಂಡರು. ಕಡಬದ ಕೃಷ್ಣ ಕಾರಂತ್, ಉದಯಕುಮಾರ್ ಬಸ್ತಿ, ಸತೀಶ್ ಕುಮಾರ್ ಕಡಬ , ಬಲ್ಯದ ಗಣೇಶ್ ಕುಮಾರ್ ಭಟ್, ಕೋಡಿಂಬಾಳದ ಅಲ್ಪಾಜ್, ಸುಳ್ಯದ ಪಾರೂಕ್, ಕೊಂಬಾರಿನ ಅಶ್ವತ್ ಕೆ.ಸಿ. ನೂತನ ಮೊಬೈಲ್ ಖರೀದಿಸಿದರು. ಈ ಸಂದರ್ಭದಲ್ಲಿ ವಿವೋ ಕಂಪೆನಿಯ ರಂಜಿತ್ ಹಾಗೂ ಸಚಿನ್‌, ಶ್ರೀ ದುರ್ಗಾಂಬ ಮೊಬೈಲ್ ಸಿಬ್ಬಂದಿಗಳಾದ ಶಿಬುಲಾಲ್, ದೇವಿಪ್ರಸಾದ್, ಮಲ್ಲಿಕಾ, ಸೌಮ್ಯ, ಉಪಸ್ಥಿತರಿದ್ದರು.

error: Content is protected !!
Scroll to Top