ಕೊನೆಗೂ ಬಂತು ಕಡಬ ತಾಲೂಕು ಉದ್ಘಾಟನೆಗೆ ಅಧಿಕೃತ ಆದೇಶ..!! ► ಮಾ. 7 ಸಾಯಂಕಾಲ ಕಂದಾಯ ಸಚಿವರಿಂದ ನೂತನ ಕಡಬ ತಾಲೂಕಿಗೆ ಚಾಲನೆ, ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.05. ಕೊನೆಗೂ ಕಡಬ ಜನತೆಯ ಬಹುಕಾಲದ ಕನಸು ನನಸಾಗುವ ಸಂದರ್ಭಕ್ಕೆ ಗಳಿಗೆ ಕೂಡಿಬಂದಿದ್ದು, ನೂತನ ಕಡಬ ತಾಲೂಕಿನ ಅಧಿಕೃತ ಉದ್ಘಾಟನೆಯು ಮಾರ್ಚ್ 07 ಗುರುವಾರದಂದು ಸಂಜೆ 5.30 ಗಂಟೆಗೆ ನಡೆಯಲಿದೆ.

ಈ ಬಗ್ಗೆ ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆಯವರ ದಕ್ಷಿಣ ಕನ್ನಡ ಪ್ರವಾಸದ ಸಮಯ ನಿಗದಿಯಾಗಿದ್ದು, ಗುರುವಾರ ಮಧ್ಯಾಹ್ನ ಮೂಡುಬಿದಿರೆ ತಾಲೂಕನ್ನು ಉದ್ಘಾಟಿಸಿ ಆ ಬಳಿಕ ಸಾಯಂಕಾಲ ಕಡಬ ತಾಲೂಕು ಉದ್ಘಾಟನೆ ಹಾಗೂ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಕಳೆದ ಐದಾರು ಬಾರಿ ದಿನ ನಿಗದಿಯಾಗಿ ಕೊನೆಯ ಹಂತದಲ್ಲಿ ಮುಂದೂಡಲ್ಪಟ್ಟಿದ್ದ ಕಡಬ ತಾಲೂಕು ಉದ್ಘಾಟನೆಗೆ ಗುರುವಾರದಂದು ಅಧಿಕೃತ ಚಾಲನೆ ದೊರೆಯಲಿದೆ.

Also Read  ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ- ವೃದ್ಧನ ರಕ್ಷಣೆ

error: Content is protected !!
Scroll to Top