ಪಂಜ ಸೇರಿದಂತೆ ಹತ್ತಿರದ 7 ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರಿಸಲು ಆಗ್ರಹ ► ಕಡಬ ತಾಲೂಕು ಉದ್ಘಾಟನೆಗೆ ಕ್ರಮ ಕೈಗೊಳ್ಳುವಂತೆ ದೇವೇಗೌಡರಿಗೆ ಮನವಿ.

(ನ್ಯೂಸ್ ಕಡಬ) newskadaba.com ಕಡಬ, ಮಾ.05. ಮಾಜಿ ಪ್ರಧಾನಿ ರಾಷ್ಟ್ರೀಯ ಜೆಡಿಎಸ್ ಅಧ್ಯಕ್ಷ ಹೆಚ್.ಡಿ ದೇವೆಗೌಡರಲ್ಲಿ ಕಡಬ ತಾಲೂಕು ಉದ್ಘಾಟನೆಯೊಂದಿಗೆ ಅಭಿವೃದ್ದಿಗೆ ಅನುದಾನ ಒದಗಿಸುವಂತೆ ರಾಜ್ಯ ಸರಕಾರ ಹಾಗೂ ಮಂತ್ರಿಗಳಿಗೆ ಸಲಹೆ ನೀಡುವಂತೆ ರಾಜ್ಯ ಜೆಡಿಎಸ್ ಕಾರ್ಯದರ್ಶಿ, ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಮನವಿ ಮಾಡಿಕೊಂಡಿದ್ದಾರೆ.

ಭಾನುವಾರದಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಿದ ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್‍ರ ನೇತೃತ್ವದ ನಿಯೋಗವು ಕಡಬ ತಾಲೂಕು ಘೋಷಣೆಯಾಗಿ ವರ್ಷಗಳೇ ಕಳೆದರೂ ಉದ್ಘಾಟನೆ ಆಗದೇ ತಾಲೂಕು ಅಭಿವೃದ್ದಿಗೆ ಅನುದಾನವನ್ನು ನೀಡದೇ ಅಬಿವೃದ್ದಿ ಆಗದಿರುವ ಬಗ್ಗೆ ವಿವರಿಸಿದಲ್ಲದೆ ಈಗಾಗಲೇ 5 ಬಾರಿ ತಾಲೂಕು ಉದ್ಘಾಟನೆಗೆ ದಿನ ನಿಗದಿಗೊಳಿಸಲಾಗಿದ್ದು ವಿನಃ ಕಾರಣ ಮುಂದುಡುತ್ತಿರುವುದು ಕಡಬ ತಾಲೂಕು ಹೋರಾಟ ಸಮಿತಿ ಹಾಗೂ ತಾಲೂಕಿನಾದ್ಯಂತ ಜನರಲ್ಲಿ ಆತಂಕ ಮೂಡಿಸಿದೆ. ಕಡಬ ತಾಲೂಕು ಹೋರಾಟ ಸಮಿತಿಯ ಕಾರ್ಯದರ್ಶಿಯಾಗಿರುವ ತಾನು ಹೋರಾಟ ಸಮಿತಿಯ ಅಧ್ಯಕ್ಷ ಸಿ. ಫಿಲಿಪ್‍ರವರ ನೇತೃತ್ವದಲ್ಲಿ 6 ದಶಕಗಳಿಂದ ಹೋರಾಟ ನಡೆಸಿದ ಫಲವಾಗಿ ಕಡಬ ತಾಲೂಕು ಘೋಷಣೆಯಾಗಿದ್ದು ಈಗಿನ ಜೆಡಿಎಸ್, ಕಾಂಗ್ರೇಸ್ ಸಮ್ಮಿಶ್ರ ಸರಕಾರದಲ್ಲಿ ಈಗಾಗಲೇ 5 ಬಾರಿ ತಾಲೂಕು ಉದ್ಘಾಟನೆ ದಿನ ನಿಗದಿಗೊಳಿಸಲಾಗಿದ್ದು ಮುಂದಿನ ಮಾ.7 ರಂದು ಉದ್ಘಾಟನೆಯಂದು ಮತ್ತೆ ದಿನ ನಿಗದಿಹೊಳಿಸಲಾಗಿರುವ ಬಗ್ಗೆ ಗಮನಕ್ಕೆ ಬಂದಿದ್ದು ಯಾವುದೇ ಕಾರಣಕ್ಕೂ ಮುಂದೂಡದೇ ಸಂಬಂಧಪಟ್ಟ ಸಮ್ಮಿಶ್ರ ಸರಕಾರದ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡು ಉದ್ಘಾಟಿಸುವುದರೊಂದಿಗೆ ಅಬಿವೃದ್ದಿಗೆ ಪೂರಕವಾದ ಅನುದಾನ ಒದಗಿಸುವುದಲ್ಲದೆ ವಿವಿಧ ಇಲಾಖೆಗಳಿಗೆ ಸೂಕ್ತವಾದ ಕಟ್ಟಡ, ಕಛೇರಿಗಳನ್ನು ಆರಂಭಿಸುವ ಮೂಲಕ ಬೇಕಾದಷ್ಟು ಹುದ್ದೆಗಳನ್ನು ಭರ್ತಿ ಮಾಡುವರೇ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದರು.

Also Read  ಸೆಪ್ಟೆಂಬರ್ 10 ರಂದು ವಿಶ್ವ ಸಾಕ್ಷರತಾ ದಿನಾಚರಣೆ

ಬೇಡಿಕೆಗಳು: ಕಳೆದ 8 ತಿಂಗಳಿನಿಂದ 5 ಬಾರಿ ಮುಂದೂಡಿದ ಕಡಬ ತಾಲೂಕು ಉದ್ಘಾಟನೆಯನ್ನು ಮಾ.10ರೊಳಗಾಗಿ ಉದ್ಘಾಟಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸುವಂತೆ ಕೋರಲಾಯಿತು. ಕಡಬ ತಾಲೂಕಿಗೆ ಸಂಬಂಧ ಪಟ್ಟಂತೆ ಹಲವಾರು ಇಲಾಖಾ ಕಛೇರಿಗಳನ್ನು ಶೀಘ್ರದಲ್ಲಿ ಪ್ರಾರಂಭಿಸಿ ಜನರಿಗೆ ಅನುಕೂಲವಾಗುವಂತೆ ಸದಿಸಲು ಕೋರಲಾಯಿತು. ಕಡಬ ತಾಲೂಕಿಗೆ ಸಂಬಂದಪಟ್ಟ ಹತ್ತಿರದ 7 ಗ್ರಾಮಗಳನ್ನು ಕೈಬಿಟ್ಟಿದ್ದು ಸುಳ್ಯ ತಾಲೂಕಿನ ಪಂಜ, ಐವತ್ತೊಕ್ಲು ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಗ್ರಾಮಗಳನ್ನು ಸೇರಿಸುವಂತೆ ಕೋರಲಾಯಿತು. ಗ್ರಾಮೀಣ ಪ್ರದೇಶವಾದ ಮಳೆನಾಡು ಕ್ಷೇತ್ರವಾಗಿರುವುದರಿಂದ ಕಳೆದ ಮಳೆಗಾಲದಲ್ಲಿ ತೀರ ಕಷ್ಟ ನಷ್ಟ ಉಂಟಾಗಿದ್ದು ಅಡಿಕೆ, ಕರಿಮೆಣಸು ಇನ್ನಿತರ ಕೃಷಿ ನಾಶವಾಗಿರುವುದರಿಂದ ರೈತರಿಗೆ ಅನುಕೂಲವಾಗುವಂತೆ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಯಿತು. ಕಡಬ ತಾಲೂಕಿನ ಪಿಜಕ್ಕಳ-ಎಡಮಂಗಿಲ ಸಂಪರ್ಕ ಪಾಲೋಳಿ ಸೇತುವೆ , ಸುಬ್ರಹ್ಮಣ್ಯ ಕೂಜುಗೋಡು ಸಂಪರ್ಕ ಸೇತುವೆ ಹಾಗೂ ಈಗಾಗಲೇ ಮಂಜೂರುಗೊಂಡಿರುವ ಎಲ್ಲಾ ಸಂಪರ್ಕ ರಸ್ತೆಗಳಿಗೆ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಎಂದು ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ತಿಳಿಸಿದ್ದಾರೆ. ಈ ನಿಯೋಗದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಮಹಮ್ಮದ್ ಕುಂಞ, ಸುಳ್ಯ ಜೆಡಿಎಸ್ ರಾಜ್ಯ ಅಧ್ಯಕ್ಷ ಎಂ.ವಿ. ಸದಾಶಿವ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್, ಕಡಬ ತಾಲೂಕು ಜೆಡಿಎಸ್ ಮಹಿಳಾ ಅಧ್ಯಕ್ಷೆ ಲೂಸಿ ವಿಕ್ಟರ್ ಮಾರ್ಟಿಸ್, ಕಡಬ ತಾಲೂಕು ಜೆಡಿಎಸ್ ಉಪಾಧ್ಯಕ್ಷ ಅಶೋಕ್ ಕೂಜುಗೋಡು, ಸೋಮಸುಂದರ ಐನೈಕಿದು, ಉತ್ತಮನ್ ಶೀರಾಡಿ ಮೊದಲಾದವರು ಉಪಸ್ಥಿತರಿದ್ದರು.

Also Read  GST ವಂಚನೆ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಲು ಹೊಸ ತಂತ್ರ: ತೆರಿಗೆ ಇಲಾಖೆ ಆಯುಕ್ತೆ ಶಿಖಾ

error: Content is protected !!
Scroll to Top