ಕಡಬ ತಾಲೂಕು ಉದ್ಘಾಟನೆಗೆ ಇನ್ನೆಷ್ಟು ದಿನ ಬೇಕು?

ವರದಿ: ವಿಜಯ ಕುಮಾರ್ ಕಡಬ
ವರದಿಗಾರರು ಸುದ್ದಿ ಬಿಡುಗಡೆ

ಕಡಬ ಜನತೆಯ ದುರಾದೃಷ್ಟವೋ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೂ, ರಾಜಕೀಯ ಮೇಲಾಟವೋ?

*ಮಾ.10ರೊಳಗೆ ಉದ್ಘಾಟನೆಯಾಗದಿದ್ದರೆ ಪ್ರತಿಭಟನೆ, ಸತ್ಯಾಗ್ರಹ-ಸೈಯದ್ ಮೀರಾ ಸಾಹೇಬ್
*ಮಾ.7ರಂದು ತಾಲೂಕು ಉದ್ಘಾಟನೆ-ಪಿ.ಪಿ.ವಗರ್ೀಸ್
*ತಾಲೂಕು ಉದ್ಘಾಟನೆ ಮುಂದೂಡಿಕೆ, ಪ್ರತಿಭಟನೆಗೆ ಸಿದ್ದತೆ-ಕೃಷ್ಣ ಶೆಟ್ಟಿ

ಕಡಬ: ಬಹು ನಿರೀಕ್ಷಿತ ಕಡಬ ನೂತನ ತಾಲೂಕು ಉದ್ಘಾಟನೆ ಮತ್ತೆ ಅನಿಶ್ಚಿತತೆಯಲ್ಲಿದೆ. ಮಾಚರ್್ 1 ರ ಬದಲು 2 ರಂದು ಉದ್ಘಾಟನೆಗೆ ದಿನ ನಿಗದಿ ಮಾಡಲಾಗಿದೆ ಎನ್ನುವ ಮಾಹಿತಿ ಸುದ್ದಿಯಾದರೂ ಇದೀಗ ಮಾ.2ರಂದು ಕೂಡ ಉದ್ಘಾಟನೆಗೊಳ್ಳದಿರುವುದು ಈ ಭಾಗದ ಜನತೆಯ ನಿರಾಸೆಗೆ ಕಾರಣವಾಗಿದೆ. ಆದರೆ ಈ ಎಲ್ಲ ನಿರಾಸೆಗಳಿಗೆ ಇಲ್ಲಿನ ಜನತೆಯ ದುರಾದೃಷ್ಟವೋ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೋ ಅಥಾವ ರಾಜಕೀಯ ಮೇಲಾಟ ಕಾರಣವೋ ಎಂದು ತಿಳಿಯದೆ ಗೊಂದಲಮಯ ವಾತಾವರಣ ನಿಮರ್ಾಣವಾಗಿದೆ. ತಾಲೂಕು ರಚನೆಗಾಗಿ ನಿರಂತರ ಹೋರಾಟಗಳು ನಡೆದಿದ್ದು ಅದರ ಫಲವಾಗಿ ತಾಲೂಕು ಘೋಷಣೆ ಆಗಿದೆ, ಜಗದೀಶ್ ಶೆಟ್ಟರ್ ಮುಖ್ಯ ಮಂತ್ರಿಯ ಕೊನೆಯ ಅವಧಿಯಲ್ಲಿ ಘೋಷಣೆಯಾದ 43 ತಾಲೂಕುಗಳ ಪೈಕಿ ಕಡಬ ತಾಲೂಕಾಗಿ ಘೋಷಣೆ ಆಗಿತ್ತು, ಬಳಿಕ ಹಲವು ವರ್ಷಗಳ ಕಾಲ ತಾಲೂಕು ಅನುಷ್ಠಾನ ಪ್ರಕ್ರೀಯೆ ನೆನೆಗುದಿಗೆ ಬಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೊನೆಯ ಅವಧಿಯಲ್ಲಿ ಪುನಃ 50 ತಾಲೂಕನ್ನು ಘೋಷಿಲಾಗಿತ್ತು. ಅದರಲ್ಲಿಯೂ ಕಡಬವನ್ನು ತಾಲೂಕಾಗಿ ಘೋಷಣೆ ಮಾಡಲಾಯಿತು. ಬಳಿಕ ಗಜೆಟ್ ನೋಟಿಪಿಕೇಶನ್ ಆಗಿತ್ತು. ಇದೀಗ ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಅವಧಿಯಲ್ಲಿ ಕಡಬ ತಾಲೂಕಿಗೆ ಉದ್ಘಾಟನೆಯ ಭಾಗ್ಯ ದೊರೆತಿದ್ದರೂ ಅದಕ್ಕೆ ಮೀನಾಮೇಷ ಎನಿಸಲಾಗುತ್ತಿರುವುದು ಇಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಐದನೇ ಬಾರಿ ಉದ್ಘಾಟನೆ ಮುಂದೂಡಲಾಗುತ್ತಿದೆ!
ಕಡಬ ತಾಲೂಕು ಉದ್ಘಾಟನೆ ಎಂದ ಕೂಡಲೇ ಈ ಬಾರಿ ಉದ್ಘಾಟನೆ ಆಗಬಹುದಾ ಎಂದು ಜನತೆ ಕೇಳುವ ಪರಿಸ್ಥಿತಿ ನಿಮರ್ಾಣವಾಗಿದೆ. ಕಳೆದ ವರ್ಷ ಮೂರು ಬಾರಿ ತಾಲೂಕು ಉದ್ಘಾಟನೆಯಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಮುಂದೂಡಿ ನಿರಾಸೆಯಾಗುತ್ತಿತ್ತು. ಕಳೆದ ನವೆಂಬರ್ 25 ರಂದು ನಾಲ್ಕನೇ ಬಾರಿ ತಾಲೂಕು ಉದ್ಘಾಟನೆಗೆ ದಿನ ನಿಗದಿಯಾಗಿ ಎಲ್ಲಾ ಸಿದ್ದತೆಗಳು ನಡೆದಿದ್ದವು. ಕಂದಾಯ ಸಚಿವ ಆರ್. ದೇಶಪಾಂಡೆ ಉದ್ಘಾಟಿಸುವುದು ಎಂದು ನಿರ್ಧರಿಸಲಾಗಿತ್ತು. ಆದರೆ ನವೆಂಬರ್ 24 ರಂದು ರಾತ್ರಿ ಮಾಜಿ ಸಚಿವ, ಚಿತ್ರ ನಟ ಅಂಬರೀಶ್ ನಿಧನ ಹಿನ್ನೆಲೆಯಲ್ಲಿ ಉದ್ಘಾಟನಾ ದಿನವನ್ನು ಮುಂದೂಡಲಾಯಿತು. ಅಲ್ಲಿಗೆ ಜನರಿಗೆ ಮತ್ತೆ ನಿರಾಸೆಯಾಯಿತು. ಅದಾದ ಬಳಿ ಮಾಚರ್್ 1 ರಂದು ಉದ್ಘಾಟನೆಗೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ಫೆ.26ರಂದು ಪೂರ್ವ ಭಾವಿ ಸಭೆ ಕೂಡಾ ನಡೆದಿತ್ತು. ಈ ಬಾರಿ ನೂರಕ್ಕೆ ನೂರು ನಿಗದಿಯಾದ ದಿನದಲ್ಲಿ ತಾಲೂಕು ಉದ್ಘಾಟನೆಯಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಮತ್ತೆ ತಾಲೂಕು ಉದ್ಘಾಟನೆಯ ಮಾತು ಠುಸ್ಸಾಗಿದೆ. ಕಡಬ ತಾಲೂಕು ಉದ್ಘಾಟನೆ ಎಂದಾಕ್ಷಣ ಜನರು ಈ ಬಾರಿ ತಾಲೂಕು ಉದ್ಘಾಟನೆ ಆಗುತ್ತಾ ಎಂದು ತಮಾಷೆಯಾಗಿ ನೋಡುವ ಸ್ಥಿತಿ ನಿಮರ್ಾಣ ಆಗಿದೆ.

Also Read  ಮಂಗಳೂರು: ರಿಕ್ಷಾ ಚಾಲಕನ ನಿರ್ಲಕ್ಷ್ಯ- ಹೆಲ್ಮೆಟ್ ಇಲ್ಲದ ಪ್ರಯಾಣ !     ➤  ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

ಕಡಬ ಜನತೆಯ ದುರಾದೃಷ್ಟವೋ, ಜನಪ್ರತಿನಿಧಿಗಳ
ಇಚ್ಚಾಶಕ್ತಿ ಕೊರತೆಯೂ, ರಾಜಕೀಯ ಮೇಲಾಟವೋ?

ಸುಮಾರು ಆರು ದಶಕಗಳ ಕಾಲ ತಾಲೂಕು ಘೋಷನೆಗಾಗಿ ಹೋರಾಟ ಮಾಡಲಾಗಿ ಕೊನೆಗೂ ಶೆಟ್ಟರ್ ಮತ್ತು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ತಾಲೂಕು ಘೋಷಣೆಯದಾಗ ಸಹಜವಾಗಿಯೇ ಈ ಭಾಗದ ಜನತೆಯಲ್ಲಿ ಸಂತಸ ಮೂಡಿತ್ತು, ಬಳಿಕದ ಬೆಳವಣಿಗೆಯಲ್ಲಿ ಗಜೇಟ್ ನೋಟಿಪಿಕೇಶನ್ ಆಗಿದ್ದರೂ ಉದ್ಘಾಟನೆಗೆ ಮಾತ್ರ ಸಮಯ ಕೂಡಿ ಬಂದಿಲ್ಲ. ಇದು ಕಡಬ ಜನತೆಯ ದುರದೃಷ್ಟವೇ ಸರಿ ಈ ಮಧ್ಯೆ ಈ ಉದ್ಘಾಟನೆಗೆ ರಾಜಕೀಯ ಕಾರಣವೂ ಅನಧಿಕೃತವಾಗಿ ಜನತೆಯನ್ನು ಕಾಡುತ್ತಿದೆ, ಇಲ್ಲಿನ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇರುತ್ತಿದ್ದರೆ, ತಮ್ಮ ತಮ್ಮ ರಾಜಕೀಯ ಲೆಕ್ಕಚಾರಗಳನ್ನು ಬದಿಗಿರಿಸಿದರೆ ಉದ್ಘಾಟನೆ ಈ ಮೊದಲೇ ಆಗಿರುತ್ತಿತ್ತು, “ಆದರೆ ಕೋಣ ನೀರಿಗೆಳೆದರೆ ಎತ್ತು ಗುಡ್ಡೆಗೆ ಎಳೆಯಿತು” ಎಂಬ ಗಾಧೆ ಮಾತಿನಂತೆ ಈ ಭಾಗದಲ್ಲಿ ಶಾಸಕರು ಒಂದು ಪಕ್ಷವನ್ನು ಪ್ರತಿನಿಧಿಸಿದರೆ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿರುವುದರಿಂದ ಹೇಳಿಕೊಳ್ಳಲಾಗದ ರಾಜಕೀಯ ಮೇಲಾಟಗಳು ನಡೆಯುತ್ತಿರುವುದು ನಿಜಕ್ಕೂ ಕಂಡು ಬರುತ್ತಿದೆ. ಈ ತಾಲೂಕು ಉದ್ಘಾಟನೆ ನೆಪದಿಂದಾಗಿ ಕಡಬ ಸಮುದಾಯ ಆಸ್ಪತ್ರೆ ಕಟ್ಟಡ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದರೂ ಕಡಬ ತಾಲೂಕು ಉದ್ಘಾಟನೆ ಮುಂದೂಡಿದರಿಂದ ಆಸ್ಪತ್ರೆ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ, ಅದರಂತೆ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ, ಅಲ್ಪಸಂಖ್ಯಾತ ಮಹಿಳಾ ಹಾಸ್ಟೇಲ್ ಶಂಕುಸ್ಥಾಪನೆ ಅಂತೆಯೇ ಹೊಸಮಠ, ಬಿಳಿನೆಲೆ ಸೇತುವೆ ಉದ್ಘಾಟನೆಗಳು ನೆನೆಗುದಿಗೆ ಬಿದ್ದಿದೆ.

Also Read  ನೂಜಿಬಾಳ್ತಿಲ ಗ್ರಾ.ಪಂ. ಗ್ರಾಮವಿಕಾಸ ಕಾಮಗಾರಿ ಅಪೂರ್ಣ ➤ ಐದು ವರ್ಷ ಕಳೆದರೂ ದಡ ಸೇರದ ಸಭಾಂಗಣದ ಕಾಮಗಾರಿ

ಮಾ.10ರೊಳಗೆ ಉದ್ಘಾಟನೆಯಾಗದಿದ್ದರೆ
ಪ್ರತಿಭಟನೆ, ಸತ್ಯಾಗ್ರಹ-ಸೈಯದ್ ಮೀರಾ ಸಾಹೇಬ್

ಈ ಬಗ್ಗೆ ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸೈಯದ್ ಮೀರಾ ಸಾಹೇಬ್ ಪ್ರತಿಕ್ರಿಯೆ ನೀಡಿ, ಇಷ್ಟು ವರ್ಷಗಳ ಕಾಲ ಹೋರಾಟದ ಫಲವಾಗಿ ಕಡಬ ತಾಲೂಕು ಘೋಷನೆ ಆಗಿದೆ, ಆದರೆ ಇದೀಗ ಉದ್ಘಾಟನೆಯನ್ನು ಪದೆ ಪದೆ ಮುಂದೂಡುತ್ತಿರುವುದು ಬೇಸರ ತಂದಿದೆ, ಇದರಿಂದ ಈ ತಾಲೂಕಿನ ಅಭಿವೃದ್ದಿಯ ಕನಸುಗಳು ನನಸಾಗುತ್ತಿಲ್ಲ, ಅನುದಾನಗಳು ಸಾಕಾಗುತ್ತಿಲ್ಲ, ಆದುದರಿಂದ ತಾಲೂಕು ಉದ್ಘಾಟನೆ ಶೀಘ್ರವೇ ಆಗಬೇಕು, ಒಂದು ವೇಳೆ ಮಾ.10ರೊಳಗೆ ಉದ್ಘಾಟನೆ ಆಗದಿದ್ದರೆ ಮಾ.11ರಂದು ಕಡಬ ತಹಸೀಲ್ದಾರ್ ಕಛೇರಿಯ ಎದುರು ಪ್ರತಿಭಟನೆ ನಡೆಸುತ್ತೇವೆ, ಮತ್ತೆಯೂ ಉದ್ಘಾಟನೆ ಆಗದಿದ್ದರೆ ಮಾ.13ರಂದು ಸತ್ಯಾಗ್ರಹ ನಡೆಸುತ್ತೇನೆ ಎಂದು ಅವರು ಎಚ್ಚರಿಸಿದ್ದಾರೆ.

ಮಾ.7ರಂದು ತಾಲೂಕು ಉದ್ಘಾಟನೆ-ಪಿ.ಪಿ.ವಗರ್ೀಸ್
ಈಗಾಗಲೇ ಹಲವಾರು ಬಾರಿ ತಾಲೂಕು ಉದ್ಘಾಟನೆ ಮುಂದೂಡಿರುವುದು ನಮಗೆ ನಿರಾಸೆಯಾಗಿರುವುದು ಸತ್ಯ, ಆದರೆ ನಾನು ಈ ಬಗ್ಗೆ ಸತತ ಪ್ರಯತ್ನ ಮಾಡಿದ್ದೇನೆ, ನ.24ರಂದು ರಾತ್ರಿ ಅಂಬರೀಷ್ರವರು ನಿಧನರಾಗುತ್ತಿರದಿದ್ದರೆ ನ.25ರಂದು ತಾಲೂಕು ಉದ್ಘಾಟನೆ ಆಗುತ್ತಿತ್ತು, ಅದರ ಬಳಿಕವೂ ನಾವು ಪ್ರಯತ್ನ ಮುಂದುವರಿಸಿದ್ದೇವೆ, ಒಂದೆರಡು ದಿನದಲ್ಲಿ ತಾಲೂಕಿಗೆ ಅನುದಾನವೂ ನಿಗದಿಯಾಗಿಗುತ್ತದೆ, ಮಾ.7ರಂದು ಮಧ್ಯಾಹ್ನ ನಂತರ ಉದ್ಘಾಟನೆ ನಡೆಯುತ್ತದೆ. ಈ ಬಗ್ಗೆ ಶೀಘ್ರದಲ್ಲಿ ಪ್ರಕಟಣೆ ನೀಡುತ್ತೇವೆ ಎಂದು ಹೇಳಿದರು. ಕಡಬ ತಾಲೂಕು ಉದ್ಘಾಟನೆ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಅವರು ಹೇಳಿದರು.

ತಾಲೂಕು ಉದ್ಘಾಟನೆ ಮುಂದೂಡಿಕೆ, ಪ್ರತಿಭಟನೆಗೆ ಸಿದ್ದತೆ-ಕೃಷ್ಣ ಶೆಟ್ಟಿ
ಕಡಬ ತಾಲೂಕು ಹೋರಾಟದಲ್ಲಿ ಯಾವುದೇ ರಾಜಕೀಯ ಇರಲಿಲ್ಲ, ಆದರೆ ಇದೀಗ ಉದ್ಘಾಟನೆಗೆ ಕಾಲ ಕೂಡಿ ಬಾರದಿರುವುದು ದುರಾದೃಷ್ಟವೇ ಸರಿ, ಆಡಳಿತ ಪಕ್ಷದ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇದ್ದರೆ ಕಂದಾಯ ಸಚಿವರನ್ನೆ ಯಾಕೆ ಕಾಯಬೇಕು, ಉಸ್ತುವಾರಿ ಸಚಿವರು ಇಲ್ಲವೇ, ಅವರಿಂದ ಮಾಡಿಸಬಹುದಲ್ವ, ಈ ಹಿಂದೆ ತಾಲೂಕು ಉದ್ಘಾಟನೆ ನಿಗದಿಯಾಗಿದ್ದಾಗ ಅದರಲ್ಲಿ ನಮ್ಮನ್ನು ಸೇರಿಸಿಕೊಳ್ಳದೆ ತಾರತಮ್ಯ ಮಾಡಲಾಗಿತ್ತು ಆದರೂ ನಾವು ತಾಲೂಕಿನ ವಿಚಾರಕ್ಕೆ ಬೇಕಾಗಿ ರಾಜಕೀಯ ಮಾಡಲಿಲ್ಲ, ಹೇಗಾದರೂ ಉದ್ಘಾಟನೆ ಮಾಡಿ ಬಿಡಿ ಎಂದರೂ ಸಚಿವರೇ ಬರಬೇಕು ಎಂದು ದಿನಾಂಕವನ್ನೆ ಮುಂದೂಡಲಾಗುತ್ತಿದೆ, ಒಟ್ಟಿನಲ್ಲಿ ಕೂಡಲೇ ತಾಲೂಕು ಉದ್ಘಾಟನೆ ಮಾಡಬೇಕು ಇಲ್ಲದಿದ್ದಲ್ಲಿ ಉದ್ಘಾಟನೆಗೆ ಬೇಕಾಗಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

error: Content is protected !!
Scroll to Top