ಕೋಡಿಂಬಾಳ: ರಬ್ಬರ್ ತೋಟಕ್ಕೆ ಬೆಂಕಿ ➤ ಬೆಂಕಿಗಾಹುತಿಯಾದ ನೂರಾರು ರಬ್ಬರ್ ಮರಗಳು

(ನ್ಯೂಸ್ ಕಡಬ) newskadaba.com ಕಡಬ, ಫೆ. 22. ರಬ್ಬರ್ ತೋಟವೊಂದಕ್ಕೆ ಬೆಂಕಿ ಬಿದ್ದ ಪರಿಣಾಮ 300 ಕ್ಕೂ ಅಧಿಕ ರಬ್ಬರ್ ಮರಗಳು ಬೆಂಕಿಗಾಹುತಿಯಾದ ಘಟನೆ ಕಡಬ ಸಮೀಪದ ಕೋಡಿಂಬಾಳದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಕೋಡಿಂಬಾಳದ ಕುಕ್ಕೆರೆ ಬೆಟ್ಟು ನಿವಾಸಿ ಸುರೇಶ್ ಎಂಬವರಿಗೆ ಸೇರಿದ ರಬ್ಬರ್ ತೋಟಕ್ಕೆ ಬೆಂಕಿ ಬಿದ್ದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿರಬಹುದೆಂದು ಊಹಿಸಲಾಗಿದೆ. ಬೆಂಕಿಯನ್ನು ನಂದಿಸುವ ಕಾರ್ಯ ಮುಂದುವರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಪುತ್ತೂರಿನಿಂದ ಆಗಮಿಸುತ್ತಿದ್ದಾರೆ.

Also Read  ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ..!! ➤ ಬಾಲಕ ಮೃತ್ಯು

error: Content is protected !!
Scroll to Top