ಮಳೆನಾಡಿನ ತಪ್ಪಲಿನ ಮೊಗೇರಡ್ಕ ಶಾಲೆಯಲ್ಲಿ ಕುಡಿಯುವ ನೀರಿಗಾಗಿ ಪರದಾಟ


ಅದೊಂದು ತೀರಾ ಕುಗ್ರಾಮ, ಇತ್ತೀಚೆಗಷ್ಟೇ ಅಭಿವೃದ್ಧಿಯ ಕನಸುಗಳು ಸಾಕಾರಗೊಳ್ಳುತ್ತಿವೆ. ಇದು ಕಡಬ ತಾಲೂಕಿನ ಗಡಿಭಾಗವಾದ ಕೊಂಬಾರು ಗ್ರಾಮ, ಮಳೆನಾಡಿನ ತಪ್ಪಲಲಲ್ಲಿರುವ ಈ ಗ್ರಾದಮ ಮೊಗೆರಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ವಾರಗಳಿಂದ ನೀರಿಗಾಗಿ ಆಹಾಕಾರ ಉಂಟಾಗಿದೆ. ಸಮಸ್ಯೆ ಬಗೆಹರಸಲು ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಇಲಾಖಾಧಿಕಾರಿಯವರಿಗೆ ನೀಡಿದ ಭರವಸೆ ಠುಸ್ಸಾಗಿದೆ.
ಇವತ್ತು ಸರಕಾರಿ ಶಾಲೆಗಳನ್ನು ಉಳಿಸಕೊಳ್ಳುವುದೇ ದೊಡ್ಡ ಸವಾಲಾಗಿರುವ ಕಾಲಘಟ್ಟದಲ್ಲಿರುವಾಗ ಶಾಲೆಗಳನ್ನು ಉಳಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡಲಾಗುತ್ತಿದೆ. ಆದರೆ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಸರಕಾರ ವಿಫಲವಾಗುತ್ತಿದೆ. ಅಂತಹ ಒಂದು ಉದಾಹರಣೆ ಮೊಗೆರಡ್ಕ 
ಶಾಲೆ. ಈ ಶಾಲೆ ಈ ಭಾಗದ ಬಡಕೂಲಿ ಕಾಮರ್ಿಕರ, ಮದ್ಯಮ ವರ್ಗದವರ ಆಶಾಕಿರಣವಾಗಿದೆ, ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾಥರ್ಿಗಳೂ ಇದ್ದಾರೆ. ಶಿಕ್ಷಕರೂ ಇದ್ದಾರೆ, ಆದರೆ ಮೂಲಭೂತ ಸೌಕರ್ಯಗಳಾದ ಕೊಠಡಿ, ಪ್ರಯೋಗ ಪರಿಕರಗಳು, ಶಾಲಾ ಕಂಪೌಂಡ್ ಮುಂತಾದ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಅದರಲ್ಲೂ ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಅವ್ಯವಸ್ಥೆಯಾಗಿ ಸುಮಾರು ಮೂರು ವಾರಗಳು ಕಳೆದು ಹೋಗಿವೆ. ಇದರಿಂದ ಇಲ್ಲಿನ ವಿದ್ಯಾಥರ್ಿಗಳು ಪಡಿಪಾಟಲು ಅನುಭವಿಸುತ್ತಿದ್ದಾರೆ. ಫೆಬ್ರವರಿ ತಿಂಗಳ ಆರಂಭದಲ್ಲಿ ಶಾಲಾ ಆವರಣದಲ್ಲಿದ್ದ ತೆರದ ಬಾವಿ ಬತ್ತಿ ಹೋಯಿತು. ಬಳಿಕ ಕೈಪಂಪು ಅಳವಡಿಕೆಯ ಕೊಳವೆ ಬಾವಿ ಕೈಕೊಟ್ಟಿತ್ತು. ಅದೂ ಕೂಡಾ ಕೆಟ್ಟು ಹೋಗಿ ಹಲವು ದಿಗಳಾಯ್ತು, ಇದೀಗ ಆ ಕೊಳವೆ ಬಾವಿ ಕೂಡಾ ಬತ್ತಿ ಹೋಗಿದೆ. ಇದನ್ನು ದುರಸ್ತಿ ಮಾಡಿ, ಅಥವಾ ನೂತನ ಕೊಳವೆ ಬಾವಿ ಕೊರೆಸಿಕೊಡಿ ಎಂದು ಇಲ್ಲಿನ ಶಾಲಾಭಿವೃದ್ಧಿ ಸಮಿತಿಯವರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮುಖಾಂತರ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಎರಡೆರಡು ಬಾರಿ ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತಿಗೂ ಮನವಿ ಮಾಡಿದ್ದಾರೆ. ಇದ್ಯಾವುದೂ ಈ ವರೆಗೆ ಫಲ ನೀಡಿಲ್ಲ. ಪರಿಣಾಮ ವಿದ್ಯಾಥರ್ಿಗಳು, ಅಕ್ಷರದಾಸೋಹ ಸಿಬ್ಬಂದಿಗಳು ಶಾಲಾ ಅನತಿ ದೂರದಿಂದ ನೀರು ಹೊತ್ತು ತರುತ್ತಿದ್ದಾರೆ. ಶೌಚಾಲಯ ನಿರ್ವಹಣೆಗೆ, ಕುಡಿಯುವುದಕ್ಕಾಗಿ ಮುಖ್ಯವಾಗಿ ಅಕ್ಷರದಾಸೋಹ ಅಡುಗೆ ಬೇಯಿಸಲು, ಪಾತ್ರೆ ತೊಳೆಯಲು ಎಲ್ಲದಕ್ಕೂ ಬೇರೆಡೆಯಿಂದ ಬಕೆಟು, ಬಿಂದಿಗೆಗಳಲ್ಲಿ ನೀರು ಹೊತ್ತು ತರುವ ಅನಿವಾರ್ಯತೆ ಮುಂದುವರಿದಿದೆ. ಇನ್ನಾದರೂ ಸಂಬಂಧಪಟ್ಟವರು ಕಣ್ಣು ತೆರೆದು ಶಾಲೆಯ ಕಡೆ ಧಾವಿಸಿ ಕ್ರಮ ಕೈಗೊಳ್ಳುವುದು ಒಳಿತು ಎಂದು ಇಲ್ಲಿನ ವಿದ್ಯಾಭಿಮಾನಿಗಳು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿ ಮೂರು ವಾರ ಕಳೆಯುತ್ತಾ ಬಂದಿದೆ. ತೆರೆದ ಬಾವಿ ಕೂಡಾ ಬತ್ತಿ ಹೋಗಿದೆ. ಕೆಟ್ಟುಹೋದ ಕೊಳವೆ ಬಾವಿ ದುರಸ್ತಿ ಮಾಡಿ, ಅಥವಾ ನೂತನ ಕೊಳವೆ ಬಾವಿ ಕೊರೆದು ಕುಡಿಯುವ ನೀರಿನ ಸಮಸ್ಯೆ ಪರಿಸಹರಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿಯವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸಮಸ್ಯೆ ಪರಿಹರಸಲು ಸೂಚನೆ ನೀಡಿದ್ದಾರೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.  

error: Content is protected !!
Scroll to Top